ತುಮಕೂರು: ಭಾರೀ ಮಳೆಗೆ ಶೆಟ್ಟಿಹಳ್ಳಿ ಅಂಡರ್ ಪಾಸ್ ಕುಸಿತ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

ಶೆಟ್ಟಿಹಳ್ಳಿ ಅಂಡರ್ ಪಾಸ್ ಕುಸಿತ: ಸಂಚಾರ ಬಂದ್ ಸಾಧ್ಯತೆ

Tumkurnews
ತುಮಕೂರು: ನಗರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಹಲವು ಅನಾಹುತಗಳು ಸಂಭವಿಸುತ್ತಿದ್ದು, ಶೆಟ್ಟಿಹಳ್ಳಿ ಅಂಡರ್ ಪಾಸ್’ಗೆ ಹೊಂದಿಕೊಂಡಿರುವ ಸರ್ವಿಸ್ ರಸ್ತೆ ಕುಸಿತವಾಗಿದೆ.
ಮಂಗಳವಾರ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಶೆಟ್ಟಿಹಳ್ಳಿ ಅಂಡರ್ ಪಾಸ್’ಗೆ ತಾಗಿಕೊಂಡಿರುವ ಸರ್ವಿಸ್ ರಸ್ತೆ ಶಿಥಿಲವಾಗಿದ್ದು, ಆಳವಾದ ಕಂದಕ ನಿರ್ಮಾಣವಾಗಿ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕುಸಿತಕ್ಕೆ ಕಾರಣವೇನು?: ಮಳೆ ಬಂದಾಗ ಅಂಡರ್ ಪಾಸ್ ಒಳಗೆ ನೀರು ನಿಲ್ಲುತ್ತಿತ್ತು. ಇದರಿಂದಾಗಿ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿತ್ತು. ಇದನ್ನು ತಪ್ಪಿಸಲು ಅಂಡರ್ ಒಳಗಿನಿಂದ ಸರ್ವಿಸ್ ರಸ್ತೆ ಕೆಳಭಾಗದಲ್ಲಿ ಸುರಂಗ ಕೊರೆದು ನೀರನ್ನು ಹೊರಗೆ ಹಾಕಲು ಕಾಮಗಾರಿ ನಡೆಸಲಾಯಿತು. ಆದರೆ ಸುರಂಗದಲ್ಲಿ ನೀರು ಸರಾಗವಾಗಿ ಹರಿಯದೇ ಮಧ್ಯದಲ್ಲಿ ಅಡಚಣೆ ಉಂಟಾಗಿದೆ. ಬಂಡೆ ಅಡ್ಡ ಬಂದು ನೀರು ಸುರಂಗದಲ್ಲಿ ಸ್ಥಗಿತಗೊಂಡಿದೆ. ಇದರಿಂದಾಗಿ ಸರ್ವಿಸ್ ರಸ್ತೆ ಶಿಥಿಲಗೊಂಡು ಇದೀಗ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಪುಟ್ ಪಾತ್ ಮುಕ್ತಗೊಳಿಸಿ: ಈ ಹಿಂದೆ ಎಸ್ಐಟಿ ಭಾಗದ ಜನರು‌ ಶೆಟ್ಟಿಹಳ್ಳಿ ಕಡೆಗೆ ಹೋಗಲು ರೈಲ್ವೇ ಹಳಿ ದಾಟುತ್ತಿದ್ದರು. ಇದೀಗ ರೈಲ್ವೆ ಹಳಿ ಬದಿಗೆ ಗೋಡೆ ಕಟ್ಟಲಾಗುತ್ತಿದೆ. ಇದರಿಂದಾಗಿ ರಸ್ತೆ ದಾಟಲು ಅಂಡರ್ ಪಾಸ್ ಅವಲಂಭಿಸಬೇಕಿದ್ದು, ತ್ರಾಸವಾಗಿದೆ. ಆದ್ದರಿಂದ ಜನರು ರಸ್ತೆ ದಾಟಲು ಪುಟ್ ಪಾತ್ ಮುಕ್ತಗೊಳಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.
ಅಂಡರ್ ಪಾಸ್ ಬಂದ್ ಸಾಧ್ಯತೆ: ಮಳೆ ಇದೇ ಪ್ರಮಾಣದಲ್ಲಿ ಮುಂದುವರಿದರೆ ಶೆಟ್ಟಿ ಹಳ್ಳಿ ಅಂಡರ್ ಪಾಸ್ ಒಳಗೆ ತುಂಬಿಕೊಳ್ಳುವ ನೀರು ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ. ಹೀಗಾದಲ್ಲಿ ಅಂಡರ್ ಪಾಸ್ ಬಂದ್ ಮಾಡುವ ಸಾಧ್ಯತೆ ಇದೆ‌. ಒಟ್ಟಿನಲ್ಲಿ ಅಂಡರ್ ಪಾಸ್ ನಿರ್ಮಾಣವಾದಾಗಿನಿಂದಲೂ ಇಲ್ಲಿನ ಜನರಿಗೆ ಇದರಿಂದ ಅನುಕೂಲಕ್ಕಿಂತ ಅನಾನುಕೂಲ ಆಗಿದ್ದೇ ಹೆಚ್ಚು ಎನ್ನುವಂತಾಗಿದೆ.

About The Author

You May Also Like

More From Author

+ There are no comments

Add yours