ಹಿಂದೂ ಮುಸ್ಲಿಮರು ಸಹೋದರರಂತೆ ಬದುಕುತ್ತಿದ್ದಾರೆ: ರಾಜೇಂದ್ರ ರಾಜಣ್ಣ

1 min read

 

ಹಿಂದೂ ಮುಸ್ಲಿಮರು ಸಹೋದರರಂತೆ ಬದುಕುತ್ತಿದ್ದಾರೆ: ರಾಜೇಂದ್ರ ರಾಜಣ್ಣ

Tumkurnews
ತುಮಕೂರು: ಜಿಲ್ಲೆಯಲ್ಲಿ ಹಿಂದು, ಮುಸ್ಲಿಮರು ಹತ್ತಾರು ವರ್ಷಗಳಿಂದ ಸಹೋದರರಂತೆ ಬದುಕುತಿದ್ದು, ಇದು ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಕಾರಣವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ತಿಳಿಸಿದರು.
ನಗರದ ಬಾರ್‌ ಲೈನ್ ರಸ್ತೆಯ ಮಕ್ಕಾ ಮಸೀದಿಯಲ್ಲಿ ಮುಸ್ಲಿಮರು ಹಮ್ಮಿಕೊಂಡಿದ್ದ ಈದ್‍ ಮಿಲಾದ್ ಪ್ರಾರ್ಥನೆ ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾವುದೇ ಹಬ್ಬ, ಹರಿದಿನ, ಉರುಸ್‍ಗಳನ್ನು ಇಬ್ಬರು ಅತ್ಯಂತ ತಾಳ್ಮೆಯಿಂದ ಆಚರಿಸುತ್ತಿರುವುದನ್ನು ನಾವು ಜಿಲ್ಲೆಯಲ್ಲಿ ಕಾಣಬಹುದಾಗಿದೆ ಎಂದರು.

ಸಿದ್ಧಗಂಗಾ ಮಠದ ಶ್ರೀಗಳ ಅವಹೇಳನ: ಪೊಲೀಸ್ ದೂರು ದಾಖಲು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ ಮಾತನಾಡಿ, ಮಕ್ಕಾ ಮಸೀದಿ ಪೊಲೀಸ್ ಇಲಾಖೆ ಕಟ್ಟಿದ ಮಸೀದಿ ಎಂದು ತಿಳಿದು ಸಂತೋಷವಾಯಿತು. ಇದರ ನಿರ್ವಹಣೆಯನ್ನು ಇಂದು ಮುಸ್ಲಿಮರು ಮಾಡುತ್ತಿರುವುದು ಸಂತೋಷದ ವಿಚಾರ. ಈ ಬಾರಿ ಗೌರಿಗಣೇಶ ಹಬ್ಬ ಮತ್ತು ಈದ್ ಮಿಲಾದ್ ಎರಡು ಒಟ್ಟಿಗೆ ಬಂದಿರುವುದು ನಮ್ಮಲ್ಲಿರುವ ಸಹೋದರ ಭಾವನೆಯನ್ನು ವ್ಯಕ್ತಪಡಿಸಲು ಸಿಕ್ಕ ಅವಕಾಶ ಎಂದು ಭಾವಿಸಿ, ಪ್ರೀತಿ ಮತ್ತು ಸೌಹಾರ್ಧತೆಯಿಂದ ಹಬ್ಬ ಆಚರಿಸುವ ಮೂಲಕ ಜಿಲ್ಲೆಯಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕೆಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ ಮಾತನಾಡಿ, ಮಹಮದ್ ಪೈಗಂಬರರ ಹುಟ್ಟು ಹಬ್ಬವಾದ ಇಂದು ಎಲ್ಲಾ ಸಮುದಾಯದವರು ಸೇರಿ ಹಬ್ಬ ಆಚರಿಸುತ್ತಿರುವುದು ಸಂತೋಷ ಮೂಡಿಸಿದೆ. ಈ ಭಾಂಧವ್ಯ ಹೀಗೆಯೇ ಮುಂದುವರೆಯಲಿ ಎಂಬ ಆಶಯ ವ್ಯಕ್ತಪಡಿಸಿದರು.

ಕರ್ನಾಟಕ ಬಂದ್: ಸೆ.29ಕ್ಕೆ ತುಮಕೂರು ಬಂದ್’ಗೆ ಕರೆ
ಮಾಜಿ ಶಾಸಕ ಎಸ್.ಷಪಿ ಅಹಮದ್ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಹಿಂದು, ಮುಸ್ಲಿಂರು ಅನಾದಿ ಕಾಲದಿಂದ ಪರಸ್ವರ ಸಹೋದರರಂತೆ ಶಾಂತಿ, ನೆಮ್ಮದಿಯಿಂದ ಬದುಕು ನಡೆಸುತ್ತಿದ್ದಾರೆ. ಎರಡು ಸಮುದಾಯಗಳ ಹಬ್ಬಗಳಲ್ಲಿ ಪರಸ್ವರ ಭಾಗಿಯಾಗಿ ಸೌಹಾರ್ದತೆಯನ್ನು ಸಾರುತಿದ್ದೇವೆ. ಇದು ಹೀಗೆಯ ಮುಂದುವರೆಯಲಿ ಎಂದರು.
ಈ ವೇಳೆ ಮುಖಂಡರಾದ ವೇಣುಗೋಪಾಲ್, ದೇವೇಗೌಡ, ಶರೀಫ್, ಮೆಹಬೂಬ್‍ಪಾಷ, ಪ್ರಕಾಶ್, ಆದಿಲ್, ಅಫ್ತಾಬ್ ಅಹಮದ್, ಅನ್ವರ್ ಪಾಷ, ಪ್ರಕಾಶ್, ಮೆಹಬೂಬ್,ಮಹಮದ್ ಇಸ್ಮಾಯಿಲ್, ಡಾ.ನಯಾಜ್ ಅಹಮದ್, ತಾಜುದ್ದೀನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಕರ್ನಾಟಕ ಬಂದ್’ಗೆ ತುಮಕೂರಿನಲ್ಲಿ ಯಾರ್ಯಾರ ಬೆಂಬಲ?: ಹೇಗಿರುತ್ತೆ ಬಂದ್? ಇಲ್ಲಿದೆ ಮಾಹಿತಿ

About The Author

You May Also Like

More From Author

+ There are no comments

Add yours