ವರದರಾಜು ಕಾಲೇಜ್ ಆಫ್ ಫಾರ್ಮಸಿಯಲ್ಲಿ ವಿಶ್ವ ಫಾರ್ಮಸಿಸ್ ಡೇ ಆಚರಣೆ
Tumkurnews
ತುಮಕೂರು: ಪ್ರತಿ ವರ್ಷ ಸೆಪ್ಟೆಂಬರ್ 25ರಂದು ವಿಶ್ವ ಫಾರ್ಮಸಿಸ್ ಡೇ ಅನ್ನು ಇಡೀ ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ. ತುಮಕೂರಿನ ರಿಂಗ್ ರೋಡ್ ರಸ್ತೆಯಲ್ಲಿರುವ ಶ್ರೀ ವರದರಾಜು ಕಾಲೇಜ್ ಆಫ್ ಫಾರ್ಮಸಿಯಲ್ಲಿ, ಕಾಲೇಜಿನ ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿ ಸೇರಿ ಸೆಪ್ಟೆಂಬರ್ 25ರಂದು ವಿಶ್ವ ಫಾರ್ಮಸಿಸ್ ಡೇ ಆಚರಿಸಿದರು.
“ಸ್ವಚ್ಛ ತುಮಕೂರು ಸ್ಪರ್ಧೆ” ಅರ್ಜಿ ಆಹ್ವಾನ
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತುಮಕೂರಿನ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಪಂಡಿತ್ ಜವಾಹರ್ ಮಾತನಾಡಿ, ಈ ಬಾರಿ ವಿಶ್ವ ಫಾರ್ಮಸಿಸ್ ಡೇ ಅದರ ಸ್ಲೋಗನ್ ಆರೋಗ್ಯ ಸೇವೆಯನ್ನು ಬಲಪಡಿಸುವ ಬಗ್ಗೆ ಫಾರ್ಮಸಿಸ್ತರ ಪಾತ್ರ ಬಗ್ಗೆ ಕುರಿತು ಮಾತನಾಡಿದರು. ಫಾರ್ಮಸಿಷ್ಟರ ಬೇಡಿಕೆಗಳನ್ನು ಸರ್ಕಾರವು ಸಹಾನುಭೂತಿಯಿಂದ ಪರಿಶೀಲಿಸಬೇಕು. ಫಾರ್ಮಸಿಷ್ಠರು ಸಂಘಟಿತರಾಗಿ ತಮ್ಮ ಹಕ್ಕುಗಳಿಗೆ ಹೋರಾಡಬೇಕೆಂದು ಇದೇ ಸಂದರ್ಭದಲ್ಲಿ ಅವರು ಮನವಿ ಮಾಡಿದರು.




+ There are no comments
Add yours