ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ: ಇಲ್ಲಿದೆ ಲಿಸ್ಟ್

1 min read

 

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ : ಸೆ.5ರಂದು ಪ್ರಶಸ್ತಿ ಪ್ರದಾನ

Tumkurnews
ತುಮಕೂರು: ಶಿಕ್ಷಕರ ದಿನಾಚರಣೆ ಅಂಗವಾಗಿ 2023-24ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಾಗಿ ಜಿಲ್ಲಾ ಆಯ್ಕೆ ಸಮಿತಿಯು ಶಿಕ್ಷಕರನ್ನು ಆಯ್ಕೆ ಮಾಡಿದ್ದು, ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸೆಪ್ಟೆಂಬರ್ 5ರಂದು ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ(ಆಡಳಿತ) ರಂಗಧಾಮಯ್ಯ ಸಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ :- ರಾಜಣ್ಣ ಪಿ.ಕೆ. ಸಹ ಶಿಕ್ಷಕ, ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ ಕಾರೇಹಳ್ಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ರಾಜು ಎಸ್., ಸಹ ಶಿಕ್ಷಕರು, ಸ.ಕಿ.ಪ್ರಾ.ಶಾಲೆ ದೊಡ್ಡಕಟ್ಟಿಗೇನಹಳ್ಳಿ, ಗುಬ್ಬಿ ತಾ., ನಾಗರಾಜಯ್ಯ.ಕೆ.ಸಿ., ಸಹ ಶಿಕ್ಷಕರು, ಸ.ಕಿ.ಪ್ರಾ.ಶಾಲೆ ಮಡಿಕೆಹಳ್ಳಿ, ಕುಣಿಗಲ್ ತಾ., ಮಂಜುಳ.ಜಿ., ಸಹಶಿಕ್ಷಕರು, ಸ.ಕಿ.ಪ್ರಾ.ಶಾಲೆ ಕೊಡಗೀಹಳ್ಳಿ, ತಿಪಟೂರು ತಾಲ್ಲೂಕು, ಸುಮ.ಎ., ಸಹಶಿಕ್ಷಕರು, ಸ.ಕಿ.ಪ್ರಾ.ಶಾಲೆ ನರಸೀಪುರ, ತುಮಕೂರು ತಾ., ಕೆಂಪರಾಜು.ಟಿ., ಸಹ ಶಿಕ್ಷಕರು, ಸ.ಕಿ.ಪ್ರಾ.ಶಾಲೆ ನಾಯಕನಹಟ್ಟಿ, ತುರುವೇಕೆರೆ ತಾ. ಇವರನ್ನು ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ : ಮಹೇಶ.ಕೆ., ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ, ತೀರ್ಥಪುರ, ಚಿಕ್ಕನಾಯಕನಹಳ್ಳಿ ತಾ., ರಂಗಸ್ವಾಮಿ ಆರ್., ಸ.ಶಿ., ಸ.ಹಿ.ಪ್ರಾ.ಶಾಲೆ ಅಣ್ಣಪ್ಪನಹಳ್ಳಿ, ಗುಬ್ಬಿ ತಾ., ಶಶಿಕುಮಾರ್.ಎಂ.ಕೆ., ದೈಹಿಕ ಶಿಕ್ಷಕರು, ಕೆ.ಪಿ.ಎಸ್. ಶಾಲೆ, ಅಮೃತೂರು, ಕುಣಿಗಲ್, ಮಂಜಪ್ಪ ಎಂ.ಎಂ., ಸಹ ಶಿಕ್ಷಕರು, ಸ.ಹಿ.ಪ್ರಾ.ಶಾಲೆ ಭೋವಿಕಾಲೋನಿ, ತಿಪಟೂರು ತಾ., ಮುತ್ತುರಾಮಯ್ಯ ಹೆಚ್.ಎಸ್., ಸಹ ಶಿಕ್ಷಕರು, ಸ.ಹಿ.ಪ್ರಾ.ಶಾಲೆ ಅರೆಗುಜ್ಜನಹಳ್ಳಿ, ತುಮಕೂರು ತಾ. ಹಾಗೂ ನಸೀಮ್ಮುನ್ನೀಸಾ ಟಿ.ಎಸ್., ಮುಖ್ಯ ಶಿಕ್ಷಕರು, ಸ.ಹಿ.ಪ್ರಾ.ಬಾ.ಶಾಲೆ, ಗೋಣಿತುಮಕೂರು, ತುರುವೇಕೆರೆ ಇವರನ್ನು ಆಯ್ಕೆ ಮಾಡಲಾಗಿದೆ.
ಪ್ರೌಢ ಶಾಲಾ ವಿಭಾಗ : ಕವಿತ ಎಂ.ಎಸ್., ವೃ.ಶಿ. ಜಯಭಾರತಿ ಪ್ರೌಢಶಾಲೆ ಮತ್ತಿಘಟ್ಟ, ಚಿಕ್ಕನಾಯಕನಹಳ್ಳಿ ತಾ., ಗಂಗರಾಜು ಎಸ್., ಸ.ಶಿ., ಸರ್ಕಾರಿ ಪ್ರೌಢಶಾಲೆ ನೇರಳೇಕೆರೆ, ಗುಬ್ಬಿ ತಾ., ಮಹದೇವಯ್ಯ ಟಿ.ಎನ್., ಸ.ಶಿ. ಸರ್ಕಾರಿ ಪ್ರೌಢಶಾಲೆ ತಾವರೇಕೆರೆ, ಕುಣಿಗಲ್ ತಾ., ಮಂಜುನಾಥ್.ಕೆ.ಸಿ., ಸ.ಶಿ., ಸ.ಪ್ರೌ.ಶಾಲೆ, ಹಳೇಪಾಳ್ಯ, ತಿಪಟೂರು ತಾ., ಗೋವಿಂದರಾಜು ಎಂ., ಸ.ಶಿ. ಸ.ಪ.ಪೂ.ಕಾಲೇಜು(ಪ್ರೌಢಶಾಲಾ ವಿಭಾಗ)ಕಣಕುಪ್ಪೆ, ತುಮಕೂರು, ಲತ ಕೆ.ಹೆಚ್., ಸ.ಶಿ. ಸರ್ಕಾರಿ ಪ್ರೌಢಶಾಲೆ ಸಂಪಿಗೆಹೊಸಹಳ್ಳಿ, ತುರುವೇಕೆರೆ ತಾಲ್ಲೂಕು ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours