ವಿಜಯ ರಾಘವೇಂದ್ರ ಪತ್ನಿ ಯಾರ ಮಗಳು? ನಿಧನಕ್ಕೆ ಕಾರಣವೇನು?

1 min read

 

ವಿಜಯ ರಾಘವೇಂದ್ರ ಪತ್ನಿ ಯಾರ ಮಗಳು? ನಿಧನಕ್ಕೆ ಕಾರಣವೇನು?

Tumkurnews
ಬೆಂಗಳೂರು; ಸ್ಯಾಂಡಲ್’ವುಡ್ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಬ್ಯಾಂಕಾಕ್ ಪ್ರವಾಸದ ವೇಳೆ ನಿಧನರಾಗಿದ್ದು, ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.
ಸ್ಯಾಂಡಲ್’ವುಡ್ ನಲ್ಲಿ ನಟ ಪುನೀತ್ ರಾಜ್ ಕುಮಾರ್, ಚಿರಂಜೀವಿ ಸರ್ಜಾ, ಬುಲ್ಲೇಟ್ ಪ್ರಕಾಶ್ ಸೇರಿದಂತೆ ನಟನಟಿಯರ ಸಾವಿನ ಸರಣಿ ಮುಂದುವರೆದಿದ್ದು, ಸಾಲುಸಾಲು ನಿಧನ ಸುದ್ದಿಯಿಂದ ಸಿನಿಪ್ರಿಯರು ಕಂಗೆಟ್ಟಿದ್ದಾರೆ.
ಸ್ಪಂದನ ಯಾರ ಮಗಳು?; ವಿಜಯ ರಾಘವೇಂದ್ರ ಪತ್ನಿ ಸ್ಪಂದನ ಖ್ಯಾತ ಪೊಲೀಸ್ ಅಧಿಕಾರಿಯೋರ್ವರ ಪುತ್ರಿ. ನಿವೃತ್ತ ಎ.ಸಿ.ಪಿ ಬಿ.ಕೆ ಶಿವರಾಂ ಅವರ ಪುತ್ರಿ ಇವರು. ವಿಜಯ ರಾಘವೇಂದ್ರ ಹಾಗೂ ಸ್ಪಂದನ ಪ್ರೇಮ ವಿವಾಹವಾಗಿದ್ದರು.
ಸಾವಿಗೆ ಕಾರಣವೇನು?; ಪತಿಗಾಗಿ ಸ್ಪಂದನ ಅವರು ಕಿಸ್ಮತ್ ಎಂಬ ಸಿನಿಮಾ ನಿರ್ಮಾಣ ಮಾಡಿದ್ದರು. ದುರಾದೃಷ್ಟವಶಾತ್ ಬ್ಯಾಂಕಾಕ್’ನಲ್ಲಿ ಸೋಮವಾರ ಮಲಗಿದ್ದ ಸ್ಥಿತಿಯಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಸಾವಿಗೆ ತೀವ್ರ ಹೃದಯಾಘಾತ ಕಾರಣವೆಂದು ತಿಳಿದುಬಂದಿದೆ.

ಸ್ಯಾಂಡಲ್’ವುಡ್ ನಟ ವಿಜಯ ರಾಘವೇಂದ್ರ ಪತ್ನಿ ನಿಧನ

About The Author

You May Also Like

More From Author

+ There are no comments

Add yours