ಶಿರಾ; ಅಂಗನವಾಡಿ ಕೇಂದ್ರದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

1 min read

 

ಅಂಗನವಾಡಿ ಕೇಂದ್ರದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Tumkurnews
ತುಮಕೂರು; ಶಿರಾ ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯ ಅಂಗನವಾಡಿ, ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 9 ಕಾರ್ಯಕರ್ತೆ, 1 ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ 46 ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮಹಿಳಾ, ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವವರು 19 ರಿಂದ 35 ವರ್ಷ ವಯೋಮಾನದೊಳಗಿರಬೇಕು. ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ತಮ್ಮ ಅರ್ಜಿಯನ್ನು ಏಪ್ರಿಲ್ 6ರೊಳಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಸ್ತ್ರೀಶಕ್ತಿ ಭವನ, ಹಳೆ ಆಸ್ಪತ್ರೆ ಹಿಂಭಾಗ, ಶಿರಾ ಇವರಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ. 08135-277578ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕೆ.ರಂಗನಹಳ್ಳಿ, ಬೇವಿನಹಳ್ಳಿ-1, ಚೆನ್ನನಕುಂಟೆ-1, ಯಾದಲಡಕುಗೊಲ್ಲರಹಟ್ಟಿ, ಅಪ್ಪಿಹಳ್ಳಿ, ಜ್ಯೋತಿನಗರ-2, ಜಾನ್‍ಕಲ್(ಬಸವನಹಳ್ಳಿ) ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆಗಳು ಸಾಮಾನ್ಯವರ್ಗಕ್ಕೆ ಮೀಸಲಿಡಲಾಗಿದ್ದು; ತಿಪ್ಪನಹಳ್ಳಿ-2(ಅಂಬೇಡ್ಕರ್ ನಗರ), ಗುಂಗರಪೇಂಟೆ ಕೇಂದ್ರದ ಕಾರ್ಯಕರ್ತೆ ಹುದ್ದೆಗಳು ಪ.ಜಾತಿಗೆ ಹಾಗೂ ಮೂಡ್ಲೇನಹಳ್ಳಿ ಕೇಂದ್ರದ ಮಿನಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಯು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ಮುಸುಕಲೋಟಿ, ಪೂಜಾರ್ ಮುದ್ದೇನಹಳ್ಳಿ ಗೇಟ್, ಪದ್ಮಾಪುರ ತಗ್ಗಿಹಳ್ಳಿ, ಕರೆಕಲ್ಲಹಟ್ಟಿ, ತಿಪ್ಪನಹಳ್ಳಿ-2(ಅಂಬೆಡ್ಕರ್ ನಗರ), ಗುಂಗರಪೇಂಟೆ ಹಾಗೂ ಬಾಲೇನಹಳ್ಳಿ ತಾಂಡ ಅಂಗನವಾಡಿ ಕೇಂದ್ರದ ಹುದ್ದೆಗಳು ಪ.ಜಾತಿಗೆ; ಕರಾದಿ ಮೊಹಲ್ಲಾ ಹಾಗೂ ಗಂಡಿಹಳ್ಳಿ ಮಠ ಕೇಂದ್ರದ ಹುದ್ದೆಗಳು ಸಾಮಾನ್ಯ(ಅಲ್ಪಸಂಖ್ಯಾತ) ವರ್ಗಕ್ಕೆ; ಗಾಣದಹುಣಸೆ, ಜಾನಕಲ್(ಬಸವನಹಳ್ಳಿ) ಹಾಗೂ ಹೊಸಬುರ್ಜು ಕೇಂದ್ರದ ಸಹಾಯಕಿ ಹುದ್ದೆಗಳು ಪ.ಪಂಗಡಕ್ಕೆ ಮೀಸಲಿಡಲಾಗಿದೆ.
ಅದೇ ರೀತಿ, ಗೋಣಿಹಳ್ಳಿ, ಚಿಕ್ಕ ಬಾಣಗೆರೆ, ಹುಂಜನಾಳು, ದೊಡ್ಡನಹಳ್ಳಿ, ಕೊಟ್ಟ-1, ಹೇರೂರು, ಮಾರನಗೆರೆ, ಮೇಕೆರೆಹಳ್ಳಿ, ದೇವರಹಟ್ಟಿ, ಬಂದಕುಂಟೆಗೊಲ್ಲರಹಟ್ಟಿ, ಯರಗುಂಟೆ, ಪುರ, ನಾಯಕರಹಟ್ಟಿ, ಸಂತೆಪೇಟೆ-2, ಚಿಕ್ಕದಾಸರಹಳ್ಳಿ, ಕರಿರಾಮನಹಳ್ಳಿ, ದೇವರಹಳ್ಳಿ, ಶಾಗದಡು-2, ರಾಮನಹಳ್ಳಿ, ಮಂಗನಹಳ್ಳಿ, ತಾಳಗುಂದ-1, ಹೊನ್ನೇನಹಳ್ಳಿ, ಕ್ಯಾದಿಗುಂಟೆ-1, ಹೊಸಬಿಜ್ಜನಬೆಳ್ಳ, ಯಾದಲಡಕುಗೊಲ್ಲರಹಟ್ಟಿ, ಅಪ್ಪಿಹಳ್ಳಿ, ಕೆ. ರಂಗನಹಳ್ಳಿ ಗೊಲ್ಲರಹಟ್ಟಿ, ಹೆಗ್ಗನಹಳ್ಳಿ ಗೊಲ್ಲರಹಟ್ಟಿ, ಜ್ಯೋತಿನಗರ-2, ವಿದ್ಯಾನಗರ, ಉದಾನಪಾಳ್ಯ(ಕಡವಿಗೆರೆ), ಕಾಳಜ್ಜಿಹಟ್ಟಿ, ಕೆಂಪನಹಳ್ಳಿ ಗೊಲ್ಲರಹಟ್ಟಿ ಹಾಗೂ ಮಾರುತಿ ನಗರ ಅಂಗನವಾಡಿ ಕೇಂದ್ರದ ಸಹಾಯಕಿ ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.

ಮಾರ್ಚ್ 12ರಂದು ನಿಷೇದಾಜ್ಞೆ; ಜಿಲ್ಲಾಧಿಕಾರಿ ಆದೇಶ

About The Author

You May Also Like

More From Author

+ There are no comments

Add yours