ಲಾರಿ ಚಕ್ರ ಸ್ಫೋಟಗೊಂಡು ಚಾಲಕ ಸಾವು
Tumkurnews
ತುಮಕೂರು; ಲಾರಿ ಚಕ್ರ ಸ್ಪೋಟಗೊಂಡು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ತಿಪಟೂರು ತಾಲ್ಲೂಕು ಹಿಂಡಿಸ್ಕೆರೆ ಸಮೀಪ ಘಟನೆ ಸಂಭವಿಸಿದ್ದು, ಕೊರಟಗೆರೆ ಮೂಲದ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬೆಳಗ್ಗೆ 6.30ರ ಸಮಯದಲ್ಲಿ ಅವಘಡ ಸಂಭವಿಸಿದೆ. 14 ಚಕ್ರದ ಲಾರಿಯ ಚಕ್ರ ಬಿಸಿಯಾಗಿದೆ ಎಂದು ಲಾರಿ ನಿಲ್ಲಿಸಿ ಚಾಲಕ ಚಕ್ರವನ್ನು ಪರಿಶೀಲಿಸಲು ತೆರಳಿದ್ದಾನೆ. ಈ ವೇಳೆ ಚಕ್ರ ಸ್ಪೋಟಗೊಂಡಿದ್ದು, ಚಾಲಕನನ್ನು ಬಲಿ ಪಡೆದಿದೆ. ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
                                            
                                            
                                            
                                            
                                            
                                            
                                            
                                            
                                            
                                    
                                    
                                    
                                    


                                    
                                    
                                    
+ There are no comments
Add yours