ಹಾಲು ಉತ್ಪಾದಕರ ಪ್ರೋತ್ಸಾಹ ಧನ ಹೆಚ್ಚಳ; ಹೊಸ ವರ್ಷಕ್ಕೆ ತುಮುಲ್ ಕೊಡುಗೆ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

Tumkurnews
ತುಮಕೂರು; ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ಸಲುವಾಗಿ ತುಮಕೂರು ಹಾಲು ಒಕ್ಕೂಟವು ಪ್ರತಿ ಲೀಟರ್ ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಹೆಚ್ಚಿಸಿದೆ.
ಅತಿವೃಷ್ಠಿಯಿಂದ ಹಾಗೂ ಹೈನುರಾಸುಗಳಿಗೆ ಹಬ್ಬಿರುವ ಚರ್ಮದ ಗಂಟುರೋಗದಿಂದ ಹೈನುರಾಸು ನಿರ್ವಹಣಾ ವೆಚ್ಚಗಳು ಹೆಚ್ಚಾಗಿದ್ದು, ಹಾಲು ಶೇಖರಣೆ ಕಡಿಮೆಯಾಗಿ ರೈತರ ಆರ್ಥಿಕ ಸ್ಥಿತಿ ಕ್ಷೀಣವಾಗುತ್ತಿರುವುದನ್ನು ಮನಗಂಡ ಒಕ್ಕೂಟದ ಆಡಳಿತ ಮಂಡಳಿಯು ಜಿಲ್ಲೆಯ ಹಾಲು ಉತ್ಪಾದಕರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಒಕ್ಕೂಟವು ಸದಸ್ಯ ಸಂಘಗಳ ಮೂಲಕ ಹಾಲು ಉತ್ಪಾದಕರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ರೂ.2.50 ರಂತೆ ವಿಶೇಷ ಪ್ರೋತ್ಸಾಹಧನವನ್ನು ನೀಡಲು ತೀರ್ಮಾನಿಸಿದೆ.
ದಿನಾಂಕ 01.11.2022 ರಿಂದ ಅನ್ವಯವಾಗುವಂತೆ ಒಕ್ಕೂಟದಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರತಿ ಲೀಟರ್ ಹಾಲಿಗೆ ರೂ. 32.21 ರಂತೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಹಾಲು ಉತ್ಪಾದಕರಿಗೆ ನೀಡುವ ಪ್ರತಿ ಲೀಟರ್ ಹಾಲಿನ ಪರಿಷ್ಕೃತ ಮೂಲ ಬೆಲೆ ರೂ.31.28 ರಂತೆ ನೀಡಿರುತ್ತದೆ.
ಮುಂದುವರೆದು ಪ್ರಸ್ತುತ ಕಾರ್ಯಚರಣೆಯಲ್ಲಿರುವ 1320 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ದಿನವಹಿ 7 ಲಕ್ಷ ಲೀಟರ್ ಹಾಲು ಶೇಖರಣೆ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯಾ ಕಾರಣಗಳಿಂದ ಹೈನುರಾಸುಗಳಿಗೆ ಮೇವಿನ ಅಭಾವ ಉಂಟಾಗಿರುವುದರಿಂದ ಹಾಲು ಶೇಖರಣೆ ನಿರೀಕ್ಷಿತ ಮಟ್ಟಕ್ಕೆ ಹೆಚ್ಚಾಗಿಲ್ಲ. ಈ ಕಾರಣ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಿ ಹೆಚ್ಚಿನ ಹಾಲು ಉತ್ಪಾದನೆಗೆ ಅನುಕೂಲವಾಗುವಂತೆ ದಿನಾಂಕ 01.01.2023 ರಿಂದ ಅನ್ವಯವಾಗುವಂತೆ ಪ್ರಸ್ತುತ ನೀಡುತ್ತಿರುವ ಪ್ರತಿ ಲೀಟರ್ ಹಾಲಿನ ದರವನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರತಿ ಲೀಟರ್ ಹಾಲಿಗೆ ರೂ. 33.71 ರಂತೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಹಾಲು ಉತ್ಪಾದಕರಿಗೆ ನೀಡುವ ಪ್ರತಿ ಲೀಟರ್ ಹಾಲಿನ ಪರಿಷ್ಕೃತ ಮೂಲ ಬೆಲೆ ರೂ.32.78 ರಂತೆ ನಿಗದಿಪಡಿಸಲು ದಿನಾಂಕ 31.12.2022 ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಿದೆ.

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ; ನಿಮಗೆಷ್ಟು ಗೊತ್ತು?
ಹಾಲು ಉತ್ಪಾದಕರಿಂದ ಸಂಗ್ರಹಿಸುವ ಹಾಲಿನ ಗುಣಮಟ್ಟಕ್ಕೆ ಆದ್ಯತೆ ನೀಡಿ ಉತ್ತಮ್ಮ ಗುಣಮಟ್ಟದ ಹಾಲನ್ನು ಸಂಗ್ರಹಿಸಿ ಒಕ್ಕೂಟಕ್ಕೆ ನೀಡುವ ಮೂಲಕ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಸಹಕರಿಸಬೇಕೆಂದು ಮತ್ತು ಎಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳು ರೈತರಿಗೆ ಹೆಚ್ಚಿನ ಹಾಲು ಉತ್ಪಾದನೆಗೆ ಪ್ರೋತ್ಸಾಹಿಸಿ ಒಕ್ಕೂಟಕ್ಕೆ ಉತ್ತಮ ಹಾಲು ಸರಬರಾಜು ಮಾಡಲು ಒಕ್ಕೂಟವು ಕೋರಿದೆ ಎಂದು ತುಮಕೂರು ಸಹಕಾರಿ ಹಾಲು ಒಕ್ಕೂಟ ನಿ.ದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours