ತುಮಕೂರು; 35 ಸಾವಿರ ಮತದಾರರ ಹೆಸರು ಪಟ್ಟಿಯಿಂದ ಔಟ್!

1 min read

 

ಜಿಲ್ಲೆಯಲ್ಲಿ 35 ಸಾವಿರ ಮತದಾರರ ಹೆಸರು ಪಟ್ಟಿಯಿಂದ ಔಟ್!

Tumkurnews
ತುಮಕೂರು; ಜಿಲ್ಲೆಯಲ್ಲಿ ಈವರೆಗೆ 35 ಸಾವಿರ ಮರಣ ಹೊಂದಿದವರ ಹೆಸರುಗಳನ್ನು ಕುಟುಂಬದವರ ಸಹಿ ಪಡೆದು, ದಾಖಲಾತಿ ಪಡೆದು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರಡು ಮತದಾರರ ಪಟ್ಟಿ ಪರಿಷ್ಕರಣೆ-2023 ಕುರಿತು ವಿವಿಧ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿ ಇ.ಪಿ.ರೇಷಿಯೋ (ಎಲೆಕ್ಟರ್ ಪಾಪ್ಯೂಲೇಷನ್ ರೇಷಿಯೋ) ಶೇ.77 ಇದೆ. ಶೇ.10ರಷ್ಟು ಜಾಸ್ತಿ ಇದೆ. ಜಿಲ್ಲೆಯ ಮತದಾರರು 21ಲಕ್ಷ ಇದ್ದಾರೆ. ಆರೋಗ್ಯಕರ ಇಪಿ ರೇಷಿಯೋ ಶೇ.67 ಇರಬೇಕು. ಶೇ.10ರಷ್ಟು ಇ.ಪಿ.ರೇಷಿಯೋ ಕಡಿಮೆ ಮಾಡಬೇಕಿದೆ. ಇ.ಪಿ.ರೇಷಿಯೋ ಕಡಿಮೆ ಮಾಡಲು 80 ವರ್ಷಕ್ಕಿಂತ ಮೇಲ್ಪಟ್ಟ ಮತದಾರರ ಬಗ್ಗೆ ಮನೆ-ಮನೆ ಭೇಟಿ ವೇಳೆ ಪರಿಶೀಲಿಸಿ, ಮರಣ ಹೊಂದಿದ, ಖಾಯಂ ಸ್ಥಳಾಂತರಗೊಂಡ ಮತದಾರರನ್ನು ನಿಯಮಾನುಸಾರ ಮತದಾರರ ಪಟ್ಟಿಯಿಂದ ಕೈಬಿಡಲು ಕ್ರಮವಹಿಸಲಾಗುತ್ತಿದೆ ಎಂದರು.

ತುಮಕೂರು ಜಿಲ್ಲೆಯಲ್ಲಿ 21 ಲಕ್ಷ ಮತದಾರರು!; ತಿದ್ದುಪಡಿಗೆ ಅವಕಾಶ ನೀಡಿದ ಆಯೋಗ
ಮರಣ ಪ್ರಕರಣಗಳ ಕುರಿತು ರಾಜಕೀಯ ಪಕ್ಷಗಳಿಗೆ ಮಾಹಿತಿ ಇದ್ದಲ್ಲಿ ಅದನ್ನು ಜಿಲ್ಲಾಡಳಿತದ ಗಮನಕ್ಕೆ ತಂದಲ್ಲಿ ಸೂಕ್ತ ದಾಖಲಾತಿ ಪಡೆದು ಡಿಲೀಟ್ ಮಾಡಲಾಗುವುದು. ಇದುವರೆಗೂ 35 ಸಾವಿರ ಮರಣ ಹೊಂದಿದವರ ಹೆಸರುಗಳನ್ನು ಕುಟುಂಬದವರ ಸಹಿ ಪಡೆದು, ದಾಖಲಾತಿ ಪಡೆದು ಪಟ್ಟಿಯಿಂದ ಹೆಸರು ತೆಗೆದು ಹಾಕಲಾಗಿದೆ ಎಂದು ವಿವರಿಸಿದರು.
“ಡಿಲೀಟ್ ಪಟ್ಟಿಯ” ಲೈವ್ ಲಿಸ್ಟ್ ಅನ್ನು ರಾಜಕೀಯ ಪಕ್ಷಗಳಿಗೆ ಪ್ರಚುರ ಪಡಿಸಲಾಗುವುದು, ರಾಜಕೀಯ ಪಕ್ಷಗಳು ಬಿಎಲ್‍ಎ(ಬೂತ್ ಲೆವೆಲ್ ಏಜೆಂಟ್)ಗಳನ್ನು ನೇಮಕ ಮಾಡಬೇಕು. ಇದು ಪ್ರಮುಖ ವಿಷಯವಾಗಿದೆ ಎಂದು ಜಿಲ್ಲಾಧಿಕಾರಿಗಳು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ತಿಳಿಸಿದರು.

ಮತದಾರರ ಪಟ್ಟಿಯಲ್ಲಿ ಹೆಸರಿದೆಯೇ?; ಚುನಾವಣಾ ಆಯೋಗದಿಂದ ಮಹತ್ವದ ಸೂಚನೆ
ಈ ಹಿಂದೆ 1ನೇ ಜನವರಿಯನ್ನು ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ 18 ವರ್ಷ ತುಂಬಿದವರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತಿತ್ತು. ಆದರೆ ಈಗ ವರ್ಷದಲ್ಲಿ ನಾಲ್ಕು ಬಾರಿ 1ನೇ ಜನವರಿ, 1ನೇ ಏಪ್ರಿಲ್, 1ನೇ ಜುಲೈ, 1ನೇ ಅಕ್ಟೋಬರ್‌ಗಳನ್ನು ಅರ್ಹತಾ ದಿನಗಳನ್ನಾಗಿ ಪರಿಗಣಿಸಲಾಗಿದೆ. 17 ವರ್ಷ ತುಂಬಿದವರೂ ಸಹ ಅರ್ಜಿ ಸಲ್ಲಿಸಬಹುದಾಗಿದ್ದು, ಅವರು ಅರ್ಹರಾದ ದಿನಾಂಕದಂದು ಅಂದರೆ 18 ವರ್ಷ ತುಂಬಿದ ನಂತರ ಅವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಅವರು ತಿಳಿಸಿದರು.
1950 ವೋಟರ್ ಹೆಲ್ಫ್ ಲೈನ್ ಮೂಲಕ ಯಾವುದೇ ಮತದಾರರ ಪಟ್ಟಿಗೆ ಸಂಬಂಧಿಸಿದ ದೂರು ದಾಖಲಿಸಬಹುದು. ಗೊಂದಲವಿದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಬಹುದು. ಅಂತೆಯೇ ವೋಟರ್ ಹೆಲ್ಪ್ ಲೈನ್ ಆ್ಯಪ್ ಮೂಲಕ ತಮ್ಮ ವಿವರಗಳನ್ನು ಪರಿಶೀಲಿಸಬಹುದು. ಎಲ್ಲವೂ ಸಹ ಈ ಆ್ಯಪ್‍ನಿಂದ ಲಭ್ಯವಾಗಲಿದೆ ಎಂದು ಚೆನ್ನಬಸಪ್ಪ ತಿಳಿಸಿದರು.
ಮರಣ ಪ್ರಕರಣ, ಖಾಯಂ ವಲಸೆ ಪ್ರಕರಣ, ಮದುವೆಯಾಗಿ ಹೋದವರ ಪ್ರಕರಣಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅವರು ತಿಳಿಸಿದರು.
ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours