ಗುಬ್ಬಿ; ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

1 min read

 

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Tumkurnews
ತುಮಕೂರು: ಗುಬ್ಬಿ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 2 ಕಾರ್ಯಕರ್ತೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 11 ಸಹಾಯಕಿ ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಡಿ. ಚೆಂಗಾವಿ ಗ್ರಾಮ ಪಂಚಾಯ್ತಿ ಕರಿಯಣ್ಣನಪಾಳ್ಯ ಗೊಲ್ಲರಹಟ್ಟಿ ಹಾಗೂ ಇರಕಸಂದ್ರ ಗ್ರಾ.ಪಂ.ಯ ಪಟ್ರಾವತನಹಳ್ಳಿ ಗೊಲ್ಲರಹಟ್ಟಿ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆ ಹುದ್ದೆಗಳು ಖಾಲಿ ಇದ್ದು, ಇತರೆ ವರ್ಗಕ್ಕೆ ಮೀಸಲಿರಿಸಲಾಗಿದೆ.
ಅದೇ ರೀತಿ ಅಡಗೂರು ಗ್ರಾ.ಪಂ.ಯ ಹೊಸಪಾಳ್ಯ, ಹೇರೂರು ಗ್ರಾ.ಪಂ. ಹೊದಲೂರು, ಇರಕಸಂದ್ರ ಗ್ರಾ.ಪಂ. ಮರಾಠಿಪಾಳ್ಯ, ಮಾವಿನಹಳ್ಳಿ ಗ್ರಾ.ಪಂ. ಗದ್ದೇಹಳ್ಳಿ-1, ಪೆದ್ದನಹಳ್ಳಿ ಗ್ರಾ.ಪಂ. ವಡವನಘಟ್ಟ, ಎಂ.ಹೆಚ್.ಪಟ್ಟಣ ಗ್ರಾ.ಪಂ. ದೊಡ್ಡನೆಟ್ಟಕುಂಟೆ, ಶಿವಪುರ ಗ್ರಾ.ಪಂ. ಅಪ್ಪಣ್ಣನಹಳ್ಳಿ, ಪಟ್ಟಣ ಪಂಚಾಯತಿ ವಾರ್ಡ್ ಸಂಖ್ಯೆ-16ರ ವ್ಯಾಪ್ತಿಯ ಸುಭಾಷನಗರ-ಎ, ವಾರ್ಡ್ ಸಂ.10ರ ಮಹಾಲಕ್ಷ್ಮೀನಗರ, ವಾರ್ಡ್ ಸಂಖ್ಯೆ-2ರ ವಿನಾಯಕ ನಗರ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿಯರ ಹುದ್ದೆಗಳು ಇತರೆ ವರ್ಗಕ್ಕೆ ಹಾಗೂ ಅಮ್ಮನಘಟ್ಟ ಗ್ರಾ.ಪಂ. ಕೋಡಿಹಟ್ಟಿ ಕೇಂದ್ರದ ಅಂಗನವಾಡಿ ಸಹಾಯಕಿ ಹುದ್ದೆಯು ಪರಿಶಿಷ್ಟ ಜಾತಿಗೆ ಮೀಸಲಿರಿಸಲಾಗಿದೆ.
ಆಸಕ್ತರು ಜಾಲತಾಣ www.anganawadirecruit.kar.nic.in ಮೂಲಕ ಸೆಪ್ಟೆಂಬರ್ 27ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

About The Author

You May Also Like

More From Author

+ There are no comments

Add yours