Tumkurnews
ತುಮಕೂರು; ಲಾರಿ ಡಿಕ್ಕಿಯಾಗಿ ಬೈಕ್ ಹಿಂಬದಿ ಸವಾರನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಾಯಗೊಂಡಿರುವ ಘಟನೆ ನಡೆದಿದೆ.
ನಗರದ ಕ್ಯಾತ್ಸಂದ್ರದ ಶ್ರೀರಾಜ್ ಚಿತ್ರ ಮಂದಿರದ ಬಳಿ ಆಪಘಾತ ಸಂಭವಿಸಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಬೀರಸಂದ್ರ ನಿವಾಸಿ, ಅರಸೀಕೆರೆ ಮೂಲದ ಕಾಂತರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಐಸಿಸ್ ಉಗ್ರರೊಂದಿಗೆ ನಂಟು; ತುಮಕೂರಿನಲ್ಲಿ NIA ದಾಳಿ, ವಿದ್ಯಾರ್ಥಿ ವಶಕ್ಕೆ
ಬೈಕ್ ಸವಾರ ಅರಸೀಕೆರೆ ತಾಲ್ಲೂಕು, ದುಮ್ಮನಹಳ್ಳಿ ನಿವಾಸಿ, ಹರ್ಷವರ್ಧನ(24) ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




+ There are no comments
Add yours