ರಾಷ್ಟ್ರ ಲಾಂಛನ ವಿರೂಪ ಪ್ರಕರಣ; ವಿವಾದಕ್ಕೆ ತುಪ್ಪ ಸುರಿದ ಜಗ್ಗೇಶ್ ಹೇಳಿಕೆ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

Tumkurnews
ತುಮಕೂರು; ಇಷ್ಟು ವರ್ಷ ನಮ್ಮ‌ ರಾಷ್ಟ್ರ ಲಾಂಛನದ ಬಾಯಿ ಮುಚ್ಚಿತ್ತು. ಈಗ ಘರ್ಜಿಸುತ್ತಿದೆ ಎಂದು ರಾಜ್ಯಸಭೆ ನೂತನ ಸದಸ್ಯ ಜಗ್ಗೇಶ್ ಹೇಳಿದರು.
ಗುರು ಪೂರ್ಣಿಮೆ ಅಂಗವಾಗಿ ಬುಧವಾರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರ ಲಾಂಛನ ವಿರೂಪ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದರು.
ಇಷ್ಟು ದಿನ ನಮ್ಮ ರಾಷ್ಟ್ರ ಲಾಂಛನದ ಬಾಯಿ ಮುಚ್ಚಿತ್ತು, ಇದೀಗ ಸ್ವಾಭಿಮಾನದಿಂದ ಬಾಯಿ ತೆರೆದು ಘರ್ಜಿಸುತ್ತಿದೆ. ಆರೋಪಗಳು ಶಿವ, ಬ್ರಹ್ಮ, ಕೃಷ್ಣನನ್ನೇ ಬಿಟ್ಟಿಲ್ಲ. ಶಮಂತಕ ಮಣಿ‌ ವಿಚಾರದಲ್ಲಿ ಕೃಷ್ಣನನ್ನೇ ಕಳ್ಳ ಅಂದರು. ಅಂತಹದರಲ್ಲಿ ಮೋದಿಯವರನ್ನು ಬಿಡುತ್ತಾರೆಯೇ ಎಂದು ಪ್ರಶ್ನಿಸುವ ಮೂಲಕ ವಿವಾದಕ್ಕೆ ತುಪ್ಪ ಸುರಿದರು.
ರಾಷ್ಟ್ರ ಲಾಂಛನದಲ್ಲಿ ಘರ್ಜಿಸುತ್ತಿರುವ ಆ ಸಿಂಹ ಪ್ರಧಾನಿ ಮೋದಿಯವರೇ. ಅಶೋಕ ಲಾಂಛನದ ಮೂಲವನ್ನು ವಿರೋಧಿಗಳು ಮ್ಯೂಸಿಯಂನಲ್ಲಿ ನೋಡಲಿ. ಮ್ಯೂಸಿಯಂನಲ್ಲಿ ಇರುವ ಹಾಗೆಯೇ ಯಥಾವತ್ತಾಗಿ ಸಿಂಹ ಲಾಂಛನವನ್ನು ಸೆಂಟ್ರಲ್ ವಿಸ್ತಾದಲ್ಲಿ ಮಾಡಲಾಗಿದೆ ಎಂದು ಲಾಂಛನ ವಿರೂಪವನ್ನು ಸಮರ್ಥಿಸಿಕೊಂಡರು.

About The Author

You May Also Like

More From Author

+ There are no comments

Add yours