Tumkur News
ತುಮಕೂರು: ಮಾಹಿತಿ ಕಣಜ ತಂತ್ರಾಂಶವು ಮಾಹಿತಿ ಹಕ್ಕು ಕಾಯ್ದೆ-2005ರ ಸೆಕ್ಷನ್ 4(2)ರ ಅಡಿಯಲ್ಲಿ ನಾಗರೀಕರಿಗೆ ನಿರ್ಧಿಷ್ಟವಾದ ಮಾಹಿತಿಯನ್ನು ಒದಗಿಸುವ ಏಕ ಗವಾಕ್ಷಿ ಮತ್ತು ಏಕೀಕೃತ ಪೋರ್ಟಲ್ ಆಗಿದ್ದು, ರಾಜ್ಯ ಎಲ್ಲಾ ನಾಗರಿಕರಿಗೆ ಮಾಹಿತಿಯನ್ನು ಸುಲಭವಾಗಿ ಲಭ್ಯವಾಗುವಂತೆ ಇ-ಆಡಳಿತ ಕೇಂದ್ರವು ಮಾಹಿತಿ ಕಣಜ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದೆ. ಈ ಪೋರ್ಟಲ್ನ ಮೂಲ ಬಳಕೆದಾರರಿಗೆ ಆರೋಗ್ಯಕರ ಮತ್ತು ಮಾಹಿತಿಪೂರ್ಣ ಪ್ರಜಾಪ್ರಭುತ್ವವನ್ನು ನಿರ್ಮಿಸಲು ಪೂರಕವಾಗಿದ್ದು, ಮಾಹಿತಿ ಕಣಜ ಪೋರ್ಟಲ್ ಇಲಾಖೆಗಳಿಂದ ಎಲೆಕ್ಟ್ರಾನಿಕ್ ಸ್ವರೂಪದಲ್ಲಿ ಮಾಹಿತಿಯನ್ನು ಪಡೆದು ಪೂರ್ವಾಭಾವಿಯಾಗಿ ಬಹಿರಂಗಪಡಿಸುವ ರಾಜ್ಯದಲ್ಲಿನ ಮೊದಲ ವೆಬ್ ಆಧಾರಿತ ಉಪಕ್ರಮವಾಗಿದೆ.
ಜಾಹೀರಾತು ಫಲಕಗಳ ಮೇಲೆ ಕಟ್ಟುನಿಟ್ಟಿನ ಕ್ರಮ; ನಿಯಮ ಮೀರಿದರೆ ಕಾನೂನು ರೀತ್ಯಾ ಕ್ರಮ!
ಸರ್ಕಾರಿ ಯೋಜನೆ ಮತ್ತು ಸೇವೆಗಳ ಕುರಿತು ರಾಜ್ಯದ ನಾಗರೀಕರನ್ನು ಸಬಲೀಕರಣಗೊಳಿಸುವ ಸಲುವಾಗಿ ಮಾಹಿತಿ ಕಣಜ ಪೋರ್ಟಲ್ನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಪೋರ್ಟಲನ್ನು ಪ್ರವೇಶಿಸಲು ನಾಗರೀಕರು ಯಾವುದೇ ಬಳಕೆದಾರರ ಹೆಸರು ಅಥವಾ ಪಾಸ್ವರ್ಡ್ ಬಳಸಬೇಕಾಗಿಲ್ಲ. ಪ್ರಸ್ತುತ 112 ಇಲಾಖೆಗಳು ಮತ್ತು ಉಪ ಇಲಾಖೆಗಳು 442 ಯೋಜನೆಗಳು ಮತ್ತು ಸೇವೆಗಳಿಗೆ ಸಂಬಧಿಸಿದ ಮಾಹಿತಿಯನ್ನು ಮಾಹಿತಿ ಕಣಜ ಪೋರ್ಟಲ್ನಲ್ಲಿ ವೀಕ್ಷಿಸಬಹುದು.(http://mahitikanaja.karnataka.gov.in/) ಮಾಹಿತಿಯ ಗುಣಮಟ್ಟವನ್ನು ಸುಧಾರಿಸಲು ಸೂಕ್ತವಾದ ಮತ್ತು ಕ್ರಿಯಾಶೀಲವಾದ ಮಾಹಿತಿಯನ್ನು ವಿವಿಧ ಮೂಲಗಳಿಂದ ಗುರುತಿಸಲು ಕರ್ನಾಟಕ ಸರ್ಕಾರವು ರಾಜ್ಯಮಟ್ಟದಲ್ಲಿ ನಾಗರಿಕ ಸಮಾಜ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಮತ್ತು ಸಿಬ್ಬಂದಿ ಆಡಳಿತ ಮತ್ತು ಸುಧಾರಣಾ ಇಲಾಖೆಯು ಇ-ಆಡಳಿತ ಕೇಂದ್ರದ ನಡುವೆ ರಾಜ್ಯ ಮಟ್ಟದಲ್ಲಿ ತ್ರಿಪಕ್ಷೀಯ ಸಂವಾದವನ್ನು ಆಯೋಜಿಸಿದ್ದು, ೪೦ಕ್ಕೂ ಹೆಚ್ಚು ಇಲಾಖೆಗಳು ಮತ್ತು ಇ-ಆಡಳಿತ ಕೇಂದ್ರದ ಜೊತೆಗೆ ೨೦ಕ್ಕೂ ಹೆಚ್ಚು ನಾಗರಿಕ ಸಮಾಜ ಸಂಸ್ಥೆಗಳು ಭಾಗವಹಿಸಿದೆ.
+ There are no comments
Add yours