Tumkur News
ತುಮಕೂರು: ಕೆರೆಗಳ ಜಲ ಸಂಪನ್ಮೂಲಗಳ ಮೀನುಪಾಶುವಾರು ಹಕ್ಕನ್ನು ಇ-ಟೆಂಡರ್ ಮೂಲಕ ಪಡೆಯಲು ಇಚ್ಚಿಸುವವರು, ಮೀನುಗಾರಿಕೆ ಇಲಾಖೆಯ ವತಿಯಿಂದ ಹೊರಡಿಸಲಾಗುವ ಇ-ಟೆಂಡರ್ ಪ್ರಕಟಣೆಯನ್ವಯ ಕರ್ನಾಟಕ ಸರ್ಕಾರದ ಇ-ಸಂಗ್ರಹಣ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳುವುದು ಮತ್ತು ಅಗತ್ಯ ಡಿ.ಎಸ್.ಸಿ ಕೀ ಪಡೆಯುವುದು ಕಡ್ಡಾಯ ಎಂದು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದರು.
ಹೊಸ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿ ಕಾಣೆ
ಚಾಲ್ತಿಯಲ್ಲಿರುವ ಒಳನಾಡು ಮೀನುಗಾರಿಕೆ ಕಾರ್ಯನೀತಿ ೨೦೧೪ ರನ್ವಯ, ಮೀನುಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕೆರೆಗಳ/ಜಲಸಂಪನ್ಮೂಲಗಳ ಮೀನು ಪಾಶುವಾರು ಹಕ್ಕನ್ನು ಸಹಕಾರ ಸಂಘಗಳಿಗೆ ಗುತ್ತಿಗೆ ಮತ್ತು ಮೀನುಗಾರರಿಗೆ ಪರವಾನಿಗೆ ಮುಖಾಂತರ ಮೀನುಗಾರಿಕೆ ನಡೆಸಲು ಅವಕಾಶ ನೀಡಲಾಗುವ ಜಲಸಂಪನ್ಮೂಲಗಳನ್ನು ಹೊರತುಪಡಿಸಿ ಉಳಿದ ಇಲಾಖಾ ವ್ಯಾಪ್ತಿಯ ಜಲಸಂಪನ್ಮೂಲಗಳನ್ನು ಇ-ಟೆಂಡರ್ ಪ್ರಕ್ರಿಯೆಯ ಮೂಲಕ ೨೦೨೨-೨೩ ನೇ ಫಸಲಿ ವರ್ಷದಿಂದ ವಿಲೇವಾರಿ ಮಾಡಲು ಸರ್ಕಾರ ಆದೇಶ ಹೊರಡಿಸಿದೆ ಎಂದು ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದರು.
+ There are no comments
Add yours