Tumkur News
ಹುಬ್ಬಳ್ಳಿ: ರಾಜ್ಯಸಭೆಯಲ್ಲಿ ಬಿಜೆಪಿಯ ಮೂವರೂ ಅಭ್ಯರ್ಥಿಗಳ ಗೆಲುವು ಕಮಲಕ್ಕೆ ಮತ್ತಷ್ಟು ಮೆರುಗು ತಂದಂತಾಗಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಆಪರೇಷನ್ ಕಮಲ ಮತ್ತೆ ಸದ್ದು ಮಾಡುತ್ತಿದೆ. ಸದ್ಯದಲ್ಲಿಯೇ ಮತ್ತಷ್ಟು ರಾಜಕೀಯ ನಾಯಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಅಶ್ವಥ್ ನಾರಾಯಣ ಹೇಳಿದರು.
ವಿಷಪೂರಿತ ನೀರು ಕುಡಿದು ಹತ್ತು ಕುರಿಗಳ ಮಾರಣಹೋಮ
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಅಶ್ವಥ್ ನಾರಾಯಣ್ ಅವರು, ರಾಜ್ಯದಲ್ಲಿ ಜನತೆ ಮತ್ತು ಹಲವು ರಾಜಕೀಯ ನಾಯಕರು ಬೇಸತ್ತಿದ್ದಾರೆ. ಇಂಥಹ ವ್ಯಕ್ತಿಗಳು ಮುಂದಿನ ದಿನಗಳಲ್ಲಿ ಬಿಜೆಪಿಗೆ ಬರ್ತಾರೆ, ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮುಂದೆ ಇನ್ನೂ ಹಲವರು ಬಿಜೆಪಿಗೆ ಬರುತ್ತಾರೆ. ಸದ್ಯ ಬಿಜೆಪಿಯಲ್ಲಿ ಇರುವಂತಹ ಉತ್ತಮ ಭವಿಷ್ಯ ಬೇರೆ ಎಲ್ಲೂ ಇಲ್ಲ ಎಂದರು.
+ There are no comments
Add yours