‘ಜನೌಷಧಿ’ ದುರ್ಬಲಗೊಳಿಸುವ ಯತ್ನ; ಸಂಸದರ ಎದುರೇ ಆರಗ ಜ್ಞಾನೇಂದ್ರ ಅಸಮಾಧಾನ

1 min read

 

Tumkurnews
ತುಮಕೂರು; ಪ್ರಧಾನಿ ನರೇಂದ್ರ ‌ಮೋದಿ ಅವರ ಮಹತ್ವಾಕಾಂಕ್ಷೆಯ ಭಾರತೀಯ ಜನೌಷಧಿ ಕೇಂದ್ರಗಳು ಬಾಗಿಲು ಮುಚ್ಚಿ ಬಹಳ ದಿನಗಳೇ ಆಗಿದ್ದು, ರಾಜ್ಯದ ಶಾಸಕ, ಸಚಿವರುಗಳು ಈ ಬಗ್ಗೆ ಮೌನವಾಗಿದ್ದಾರೆ. ಅದರಲ್ಲೂ ಸಂಸದರುಗಳನ್ನು ಈ ಬಗ್ಗೆ ಪ್ರಶ್ನೆ ಮಾಡುವಂತೆಯೇ ಇಲ್ಲ. ಇಂತಹ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಜನೌಷಧಿ ಕೇಂದ್ರಗಳು ಕಣ್ಮರೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಬಡವರಿಗೆ ಕೈಗೆಟುಕುವ ದರದಲ್ಲಿ ಔಷಧಿಗಳನ್ನು ಒದಗಿಸುತ್ತಿದ್ದ ಜನೌಷಧಿ ಕೇಂದ್ರಗಳನ್ನು ಉಳಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶಿಕ್ಷಣ ಸಚಿವ ನಾಗೇಶ್ ಮನೆಗೆ ಬೆಂಕಿ ಹಚ್ಚುವ ಯತ್ನ; 15 ಮಂದಿ ಪೊಲೀಸ್ ವಶಕ್ಕೆ
ಸಭೆಯಲ್ಲಿ ಪ್ರಸ್ತಾಪ; ಜನೌಷಧಿ ಯೋಜನೆಯನ್ನು ದುರ್ಬಲಗೊಳಿಸುವ ಯತ್ನಗಳು ನಡೆಯುತ್ತಿವೆ, ಹಾಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ 2021-22ನೇ ಸಾಲಿನ 4ನೇ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪಠ್ಯ ಪುಸ್ತಕ ವಿಚಾರದಲ್ಲಿ ಅಸಹಿಷ್ಣುತೆ ಮೇರೆ ಮೀರುತ್ತಿದೆ; ಆರಗ ಜ್ಞಾನೇಂದ್ರ
ಬಡವರು ಮತ್ತು ದಲಿತರಿಗೆ ಕಡಿಮೆ ದರದಲ್ಲಿ ಜನೌಷದಿ ಕೇಂದ್ರಗಳ ಮೂಲಕ ಔಷಧಿ ಒದಗಿಸುವುದು ಸರ್ಕಾರದ ಆಶಯವಾಗಿದೆ. ಈ ಕೇಂದ್ರಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಹಾಗಾಗದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೈಜೋಡಿಸಿ ಜನೌಷಧಿ ಕೇಂದ್ರಗಳಲ್ಲಿ ಎಲ್ಲಾ ಸಮಯದಲ್ಲಿಯೂ ಎಲ್ಲಾ ಔಷಧಿಗಳು ಸಿಗುವಂತೆ ನೋಡಿಕೊಳ್ಳಬೇಕಿದೆ. ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಇನ್ನೊಂದು ತಿಂಗಳೊಳಗಾಗಿ ಜನರಿಕ್ ಔಷಧಿ ಕೇಂದ್ರ ಪ್ರಾರಂಭಿಸಬೇಕು ಎಂದು ಸಂಸದ ಜಿ.ಎಸ್ ಬಸವರಾಜು ಮುಂದೆಯೇ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೂ ವೈದ್ಯಾಧಿಕಾರಿಗಳು ಖಾಸಗಿ ಮೆಡಿಕಲ್ ಸ್ಟೋರ್ ಗಳಿಗೆ ಚೀಟಿ ಬರೆದು ಕೊಡುವುದು ಮತ್ತು ಖಾಸಗಿ ನರ್ಸಿಂಗ್ ಹೋಮ್‍ಗಳಿಗೆ ಬಡ ರೋಗಿಗಳನ್ನು ಶಿಫಾರಸ್ಸು ಮಾಡುವ ಪ್ರವೃತ್ತಿ ತಪ್ಪಬೇಕು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.

ತುಮಕೂರು ಶಿಕ್ಷಣ ಇಲಾಖೆಯಲ್ಲಿ ಉದ್ಯೋಗ; ಇಂದೇ ಅರ್ಜಿ ಸಲ್ಲಿಸಿ
ಜಿಲ್ಲೆಯಲ್ಲಿ 7.40 ಲಕ್ಷ ಜನರಿಗೆ ಆಯುಷ್ಮಾನ್ ಕಾರ್ಡ್ ವಿತರಿಸಲಾಗಿದ್ದು, ಎಲ್ಲರಿಗೂ ಈ ಬಹುಪಯೋಗಿ ಕಾರ್ಡ್‌ನ್ನು ಆಂದೋಲನ ರೀತಿಯಲ್ಲಿ ವಿತರಣೆ ಮಾಡಬೇಕು ಎಂದರು.
ಒಟ್ಟಿನಲ್ಲಿ ಜನೌಷಧಿ ಕೇಂದ್ರಗಳು ಬಹುತೇಕ ಜಿಲ್ಲಾ ಹಾಗೂ ಕೇಂದ್ರಗಳಲ್ಲಿ ಬಾಗಿಲು ಮುಚ್ಚಿದ್ದು, ಅವುಗಳನ್ನು ಪುನಃ ಆರಂಭಿಸಲು ಅಧಿಕಾರಿಗಳು ಕ್ರಮ ವಹಿಸಬೇಕಿದೆ.

ತುಮಕೂರಿನ ವಿವಿಧ ನ್ಯಾಯಾಲಯಗಳಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆ ಆರಂಭ

About The Author

You May Also Like

More From Author

+ There are no comments

Add yours