Tumkurnews
ತುಮಕೂರು; ಪ್ರಖ್ಯಾತ ಕ್ರೀಡಾ ಶಿಕ್ಷಕ ರಾಜಾರಾವ್ ಥಾವರೆ ಬುಧವಾರ ಸಂಜೆ ಎಸ್‌ಐಟಿ ಬಡಾವಣೆಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಇಬ್ಬರು ಗಂಡು ಹಾಗೂ ಓರ್ವ ಪುತ್ರಿ ಹಾಗೂ ಕುಟುಂಬ ಸೇರಿದಂತೆ ಅಪಾರ ಬಂಧುಬಳಗ ಹಾಗೂ ಶಿಷ್ಯ ವೃಂದವನ್ನು ಅಗಲಿದ್ದಾರೆ.
ಕಳೆದ ವರ್ಷವಷ್ಟೇ ರಾಜಾರಾವ್ ರವರ ಧರ್ಮಪತ್ನಿ ಜಯಂತಿಬಾಯಿ ಅನಾರೋಗ್ಯ ನಿಮಿತ್ತ ನಿಧನರಾಗಿದ್ದರು. ಅದರ ಬೆನ್ನಲ್ಲೇ ಇದೀಗ ರಾಜರಾವ್ ಥಾವರೆ ಇಹಲೋಕ ತ್ಯಜಿಸಿದ್ದಾರೆ.
ಇಂದು ಅಂತ್ಯ ಕ್ರಿಯೆ; ಗುರುವಾರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ ಎಂದು ಪುತ್ರ ನಿರಂಜನ್ ಮಾಹಿತಿ ನೀಡಿದ್ದಾರೆ.
ಅತ್ಯದ್ಭುತ ವಾಕ್ಚಾತುರ್ಯ ಹೊಂದಿದ್ದ ರಾಜಾರಾವ್ ಅನೇಕ ಕ್ರೀಡಾ ಕಾರ್ಯಕ್ರಮಗಳು, ರಾಷ್ಟ್ರೀಯ ಹಬ್ಬಗಳನ್ನು ತಮ್ಮ ಕಂಚಿನ ಕಂಠದಿಂದ, ಸ್ಪಷ್ಟ ಕನ್ನಡದಲ್ಲಿ ನಿರೂಪಣೆ ಮಾಡುತ್ತಿದ್ದರು.
+ There are no comments
Add yours