Tumkurnews
ತುಮಕೂರು; ಮೇ 20ರಂದು ಮಂಡನೆಯಾದ ತುಮಕೂರು ಮಹಾನಗರ ಪಾಲಿಕೆಯ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಪಾಲಿಕೆ ಸದಸ್ಯರ ಪ್ರವಾಸಕ್ಕೆ ಭಾರೀ ಮೊತ್ತವನ್ನು ಮೀಸಲಿಡಲಾಗಿದೆ.
ಮಹಾನಗರ ಪಾಲಿಕೆಯ ತೆರಿಗೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ನಳಿನ ಇಂದ್ರಕುಮಾರ್ ಶುಕ್ರವಾರ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಸದರಿ ಬಜೆಟ್ ನಲ್ಲಿ ಪಾಲಿಕೆ ಸದಸ್ಯರ ಅಧ್ಯಯನ ಪ್ರವಾಸಕ್ಕೆ 30 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ.
ವಿರೋಧವಿತ್ತು; ಜನರ ತೆರಿಗೆ ಹಣದಲ್ಲಿ ಪಾಲಿಕೆ ಸದಸ್ಯರು ಪ್ರವಾಸ ಹೋಗುವುದಕ್ಕೆ ಸಾರ್ವಜನಿಕರ ವಿರೋಧವಿತ್ತು. ಈ ಹಿಂದಿನ ಸಾಲಿನ ಬಜೆಟ್ ಅವಧಿಯಲ್ಲೇ ಅಧ್ಯಯನದ ಹೆಸರಿನಲ್ಲಿ ಪಾಲಿಕೆ ಸದಸ್ಯರು ಪ್ರವಾಸ ಹೋಗುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದರು. ಸದಸ್ಯರು ಪ್ರವಾಸದಲ್ಲಿ ಏನನ್ನು ಅಧ್ಯಯನ ಮಾಡಿದರು, ಅದನ್ನು ನಗರದ ಅಭಿವೃದ್ಧಿಯಲ್ಲಿ ಅಳವಡಿಸಿಕೊಳ್ಳಲಾಗಿದೆಯೇ? ಈ ಯಾವುದೇ ಮಾಹಿತಿ ನಾಗರೀಕರಿಗೆ ಲಭಿಸುವುದಿಲ್ಲ. ಹೀಗಾಗಿ ಜನರ ತೆರಿಗೆ ಹಣದಲ್ಲಿ ಸದಸ್ಯರು ಪ್ರವಾಸ ಹೋಗುವುದು ಸರಿಯಲ್ಲ ಹಾಗೂ ಅದಕ್ಕಾಗಿ ದುಬಾರಿ ಮೊತ್ತವನ್ನು ಮೀಸಲಿಡುವುದು ಕೂಡ ಸರಿಯಲ್ಲ ಎಂದು ಜನರು ವಿರೋಧಿಸಿದ್ದರು. ವಿರೋಧದ ನಡುವೆಯೂ ಪಾಲಿಕೆ ಈ ಬಾರಿಯ ಬಜೆಟ್‌ನಲ್ಲಿ ಕೂಡ ಪ್ರವಾಸಕ್ಕೆ ಹಣ ಮೀಸಲಿಟ್ಟಿದೆ. ಒಟ್ಟಾರೆಯಾಗಿ ಅಧ್ಯಯನ ಪ್ರವಾಸದಿಂದ ನಗರಕ್ಕೆ ಏನು ಉಪಯೋಗವಾಗುತ್ತದೆ ಎಂದು ಕಾದು ನೋಡಬೇಕಿದೆ.
ತುಮಕೂರು ಪಾಲಿಕೆಯ 2022-23ನೇ ಸಾಲಿನ ಬಜೆಟ್ ಮಂಡನೆ; ಇಲ್ಲಿದೆ ಸಂಪೂರ್ಣ ವಿವರ
+ There are no comments
Add yours