Tumkurnews
ತುರುವೇಕೆರೆ; ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಶೆಟ್ಟಿಗೊಂಡನಹಳ್ಳಿ ಸಮೀಪ ಮೂರು ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಯಡಿಯೂರು-ಕಲ್ಲೂರು ಮುಖ್ಯರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಜಲಧಿಗೆರೆ ಕಡೆಯಿಂದ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಕಲ್ಲೂರು ಕಡೆಗೆ ಎರಡು ಬೈಕ್ ಗಳಲ್ಲಿ ನಾಲ್ವರು ತೆರಳುತ್ತಿದ್ದರು. ಇತ್ತ ಕಲ್ಲೂರು ಕಡೆಯಿಂದ ಒಂದು ಬೈಕಿನಲ್ಲಿ ಇಬ್ಬರು ಬರುತ್ತಿದ್ದರು. ಈ ಮೂರು ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಓರ್ವನ ಸ್ಥಿತಿ ಗಂಬೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವ ಪ್ರಾಣಾಪಾಯದಿಂದ ಪಾರಾಗಿದ್ದು, ಮಾಯಸಂದ್ರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
+ There are no comments
Add yours