Tumkurnews
ತುಮಕೂರು; ಶಿರಾ ಮೂಲದ ಚಂದ್ರಕಾಂತ ಆರ್ಯ ಎಂಬುವವರು ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಭಾಷಣ ಮಾಡಿ ಗಮನ ಸೆಳೆದಿದ್ದಾರೆ.
ಸುಮಾರು ಒಂದು ನಿಮಿಷ ಕನ್ನಡದಲ್ಲಿ ಭಾಷಣ ಮಾಡಿ ಕೆನಡಾದಲ್ಲಿ ಕನ್ನಡದ ಕಂಪನ್ನು ಹರಡಿದ್ದಾರೆ. ಚಂದ್ರಕಾಂತ್ ಆರ್ಯ ಕೆನಡಾದ ನೇಪಿಯನ್ ಕ್ಷೇತ್ರದಿಂದ ಲಿಬರ್ಟಿ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. 2018ರಲ್ಲಿ ಕೆನಡಾ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿ ಚಂದ್ರಕಾಂತ್ ಆರ್ಯ ಗಮನ ಸೆಳೆದಿದ್ದರು. ಇದೀಗ ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಭಾಷಣ ಮಾಡಿ ಕನ್ನಡಿಗರ ಗಮನ ಸೆಳೆದಿದ್ದಾರೆ.
ಕನ್ನಡಿಗನಾಗಿ ನನಗೆ ಹೆಮ್ಮೆ ಇದೆ ಎಂದ ಅವರು, ಕುವೆಂಪು ಅವರ “ಎಲ್ಲಾದರೂ ಇರು ಎಂತಾದರೂ ಇರು; ನೀನು ಕನ್ನಡವಾಗಿರು” ಎಂಬ ಪದ್ಯವನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದು, ತಮ್ಮ ಊರಿನ ಕುರಿತು ಮಾತನಾಡಿದ್ದಾರೆ.
ಬಿ.ಇ ಮತ್ತು ಎಂ.ಬಿ.ಎ ಪದವೀಧರರಾಗಿರುವ ಚಂದ್ರಕಾಂತ್, 2003 ರಲ್ಲಿ ಕೆನಡಾದ ಖಾಸಗಿ ಕಂಪನಿಯಲ್ಲಿ ಹಣಕಾಸು ಅಧಿಕಾರಿಯಾಗಿ ಕೆಲಸಕ್ಕೆ ಸೇರಿದ್ದರು.
ಬಳಿಕ ರಾಜಕೀಯಕ್ಕೆ ಧುಮುಕಿದ ಚಂದ್ರಕಾಂತ್, ಈಗ ಸಂಸತ್ ಸದಸ್ಯರಾಗಿದ್ದಾರೆ. ಇವರು ಶಿರಾ ತಾಲೂಕಿನ ದ್ವಾರಾಳು ಗ್ರಾಮದವರು.
+ There are no comments
Add yours