ಭಾರಿ ಮಳೆ, ಸಿಡಿಲು ಬಡಿದು ಶಿರಾದ ರೈತ ಸಾವು

1 min read

 

ತುಮಕೂರು ನ್ಯೂಸ್.ಇನ್
Tumkurnews.in

ಜಿಲ್ಲೆಯಲ್ಲಿ ಗುರುವಾರ ತುಮಕೂರು, ಹುಳಿಯಾರು, ಶಿರಾ ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆಯಾಗಿದ್ದು, ಸಿಡಿಲಿಗೆ ಓರ್ವ ರೈತ ಬಲಿಯಾಗಿದ್ದಾನೆ‌.
ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯ ಜನಕಲ್ಲು ಎಂಬ ಗ್ರಾಮದಲ್ಲಿ ಘಟನೆ ಸಂಭವಿಸಿದೆ.
ಮಹಾಲಿಂಗ(45) ಮೃತ ದುರ್ದೈವಿಯಾಗಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಜೋರಾಗಿ ಗುಡುಗು ಸಹಿತ ಮಳೆ ಬಂದಿದೆ. ಮಳೆಯಿಂದ ರಕ್ಷಣೆಗಾಗಿ ಮರದ ಕೆಳಗೆ ಹೋಗಿ ನಿಂತಿದ್ದಾಗ ಸಿಡಿಲು ಬಡಿದಿದ್ದು, ಸ್ಥಳದಲ್ಲೇ ಸಾವು ಸಂಭವಿಸಿದೆ.

You May Also Like

More From Author

+ There are no comments

Add yours