ತುಮಕೂರಿನ ವ್ಯಕ್ತಿಯನ್ನು ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿದ್ದಾರೆ ಪ್ರಧಾನಿ ಮೋದಿ! ಯಾರು ಆ ಅದೃಷ್ಟವಂತ?

1 min read

 

ತುಮಕೂರು ನ್ಯೂಸ್.ಇನ್
Tumkurnews.in

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ವಿಟ್ಟರ್ ನಲ್ಲಿ 6 ಕೋಟಿ ಜನರು ಹಿಂಬಾಲಿಸುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಕೇವಲ 2,354 ಜನರನ್ನು ಮಾತ್ರ ಹಿಂಬಾಲಿಸುತ್ತಿದ್ದಾರೆ. ಆ ಅದೃಷ್ಟವಂತರ ಪೈಕಿ ತುಮಕೂರು ‌ಜಿಲ್ಲೆಯ ಓರ್ವ ವ್ಯಕ್ತಿ ಕೂಡ ಇದ್ದಾರೆ.
ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಜಡೆ ಮಾಯಾಸಂದ್ರದ ವ್ಯಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಹಿಂಬಾಲಿಸುತ್ತಿದ್ದಾರೆ. ಅವರೇ ನಮ್ಮ ನವರಸ ನಾಯಕ ಜಗ್ಗೇಶ್!

ನಿಜ, ಕನ್ನಡದ ಖ್ಯಾತ ಹಾಸ್ಯ ನಟ ಹಾಗೂ ಬಿಜೆಪಿ ನಾಯಕ ಜಗ್ಗೇಶ್ ಅವರನ್ನು ಪ್ರಧಾನಿ ಮೋದಿ ಹಿಂಬಾಲಿಸುತ್ತಿದ್ದಾರೆ. ಈ ಖುಷಿಯ ವಿಚಾರವನ್ನು ಜಗ್ಗೇಶ್ ‌ಟ್ವಿಟ್ ಮಾಡಿದ್ದು, ಆಸ್ಕರ್ ಪ್ರಶಸ್ತಿ ಸಿಕ್ಕಷ್ಟು ಸಂತೋಷವಾಗಿದೆ ಎಂದಿದ್ದಾರೆ.

You May Also Like

More From Author

+ There are no comments

Add yours