ಬಿಜೆಪಿ ಮೂರು ಮಂಡಲ ಅಧ್ಯಕ್ಷರುಗಳ ನೇಮಕ, ಪ್ರಾಮಾಣಿಕರ ಕೈ ಹಿಡಿದ ನಾಯಕರು

1 min read

 

ತುಮಕೂರು ನ್ಯೂಸ್. ಇನ್
Tumkurnews.in

ಜಿಲ್ಲೆಯಲ್ಲಿ ಬಾಕಿ ಉಳಿದಿದ್ದ ಬಿಜೆಪಿಯ ಮೂರು ಮಂಡಲ ಅಧ್ಯಕ್ಷರುಗಳ ನೇಮಕವಾಗಿದೆ.
ಚಿಕ್ಕನಾಯಕನಹಳ್ಳಿ ಮಂಡಲ ಅಧ್ಯಕ್ಷರಾಗಿ ಎಂ.ಎಂ ಜಗದೀಶ್ ಗೋಡೆಕೆರೆ, ತುರುವೇಕೆರೆ ಮಂಡಲ ಅಧ್ಯಕ್ಷರಾಗಿ ವಿಶ್ವನಾಥ ಹೆಡಿಗೆಹಳ್ಳಿ, ತುಮಕೂರು ಮಂಡಲ ಅಧ್ಯಕ್ಷರಾಗಿ ಟಿ.ಎಚ್ ಹನುಮಂತರಾಜು ನೇಮಕೊಂಡಿದ್ದಾರೆ.
ತುಮಕೂರು ಮಂಡಲ ಪ್ರಧಾನ ಕಾರ್ಯದರ್ಶಿಗಳಾಗಿ ರಾಜೀವ್ ಕೆ ಹಾಗೂ ಗಣೇಶ್ ಜಿ.ಪ್ರಸಾದ್ ಅವರನ್ನು ಪಕ್ಷದ ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡ ನೇಮಕ ಮಾಡಿ ಆದೇಶಿಸಿದ್ದಾರೆ.
*
ಕಾರ್ಯಕರ್ತರಲ್ಲಿ ಸಂಭ್ರಮ:
ತುಮಕೂರು ನಗರ ಮಂಡಲಕ್ಕೆ ಟಿ.ಎಚ್ ಹನುಮಂತರಾಜು ಅವರನ್ನು ಆಯ್ಕೆ ಮಾಡಿರುವ ಪಕ್ಷದ ಮುಖಂಡರ ನಿರ್ಧಾರಕ್ಕೆ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಹಿಂದಿನ ನಾಲ್ಕು ವರ್ಷಗಳ ಕಾಲ ಬಿಜೆಪಿಯ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾಗಿದ್ದ ಟಿ.ಎಚ್ ಹನುಮಂತರಾಜು, ಪಕ್ಷದ ಪ್ರಾಮಾಣಿಕ ಕಾರ್ಯಕರ್ತರೆಂದು ಗುರುತಿಸಿಕೊಂಡವರು. ಹೀಗಾಗಿ ಅವರಿಗೆ ಪ್ರಮುಖ ಜವಾಬ್ದಾರಿ ನೀಡಿರುವುದು ಸಹಜವಾಗಿ ಕಾರ್ಯಕರ್ತರ ಖುಷಿ ಹೆಚ್ಚಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಅವರನ್ನು ಅಭಿನಂದಿಸಿ ಪೋಸ್ಟ್ ಹಾಕುತ್ತಿದ್ದು, ಪ್ರಾಮಾಣಿಕ ಕಾರ್ಯಕರ್ತರನ್ನು ನಾಯಕರು ಗುರುತಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

You May Also Like

More From Author

+ There are no comments

Add yours