ಜಿಲ್ಲೆಯಲ್ಲಿ 32 ಹೊಸ ಕೊರೊನಾ ಕೇಸ್ ಪತ್ತೆ, ಮಹಿಳೆ ಸಾವು

1 min read

 

ತುಮಕೂರು ನ್ಯೂಸ್. ಇನ್ (ಜು.15) tumkurnews.in

ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ 32 ಜನರಲ್ಲಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದ್ದು, ಒಂದು ಸಾವು ಸಂಭವಿಸಿದೆ.
*
ತಾಲೂಕುವಾರು ವಿವರ:
ಚಿಕ್ಕನಾಯಕನಹಳ್ಳಿ 6
ಕೊರಟಗೆರೆ 1
ಮಧುಗಿರಿ 8
ತುಮಕೂರು 17
ಒಟ್ಟು 32
*
ಗುಬ್ಬಿ, ಕುಣಿಗಲ್, ಪಾವಗಡ, ಶಿರಾ, ತಿಪಟೂರು ಹಾಗೂ ತುರುವೇಕೆರೆ ತಾಲ್ಲೂಕಿನಲ್ಲಿ ಯಾವುದೇ ಹೊಸ ಪ್ರಕರಣ ಕಂಡು ಬಂದಿಲ್ಲ.
ಬುಧವಾರ 49 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 367 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೂ 597 ಜನರಿಗೆ ಸೋಂಕು ದೃಢಪಟ್ಟಿದೆ.
*
ಹೊಸ ಸೋಂಕಿತರಲ್ಲಿ ಇಬ್ಬರು ಬಾಣಂತಿಯರಾಗಿದ್ದು, ಇಬ್ಬರು ಪೊಲೀಸರಿಗೆ ಸೋಂಕು ತಗಲಿದೆ.
*
ತುಮಕೂರು ತಾಲ್ಲೂಕಿನ ಚಿಕ್ಕಸರಾಂಗಿ ಗ್ರಾಮದ 58 ವರ್ಷದ ಸೋಂಕಿತ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಜು.5 ರಂದು ಜಿಲ್ಲಾಸ್ಪತ್ರೆಯಲ್ಲಿ ಇವರ ಗಂಟಲು ದ್ರವ ಮಾದರಿಯನ್ನು ತೆಗೆದು ತಪಾಸಣೆಗೆ ಒಳಪಡಿಸಲಾಗಿತ್ತು, ಅದೇ ದಿನ ಪಾಸಿಟಿವ್ ಬಂದಿದ್ದರಿಂದ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಜು.14 ರಂದು ಸಾವನ್ನಪ್ಪಿದ್ದಾರೆ‌.

You May Also Like

More From Author

+ There are no comments

Add yours