ತುಮಕೂರು ನಗರದ 8 ಬಡಾವಣೆಗೆ ಕೊರೊನಾ ಪ್ರವೇಶ, ಜಿಲ್ಲೆಯಲ್ಲಿ 14 ಹೊಸ ಕೇಸ್ ಪತ್ತೆ

1 min read

 

ತುಮಕೂರು(ಜು.9) tumkurnews.in

ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 14 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ ಎಂದು ಡಿಎಚ್ಒ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಚಿಕ್ಕನಾಯಕನಹಳ್ಳಿ 1, ತಿಪಟೂರು 3, ತುರುವೇಕೆರೆ 1 ಹಾಗೂ ತುಮಕೂರಿನಲ್ಲಿ 9 ಜನರಿಗೆ ಸೋಂಕು ತಗಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 333 ಕ್ಕೆ ಏರಿದೆ.
ಇದೇ ದಿನ ಜಿಲ್ಲೆಯಲ್ಲಿ 17 ಜನ ಗುಣಮುಖರಾಗಿ ಮನೆಗೆ ಹೋಗಿದ್ದಾರೆ, ಒಟ್ಟು 223 ಸಕ್ರಿಯ ಸೋಂಕಿತರಿದ್ದಾರೆ.

ಸೋಂಕಿತರ ವಿವರ:
ತುಮಕೂರಿನಲ್ಲಿ ಮಹಾಲಕ್ಷ್ಮಿ ನಗರದ ಪುರುಷ(30), ಬಿ.ಜಿ ಪಾಳ್ಯದ ಪ್ರಸನ್ನ ಕುಮಾರ್ ಬಡಾವಣೆಯ ಪುರುಷ(47), ಮಹಾಲಕ್ಷ್ಮಿ ನಗರದ ಮಹಿಳೆ (28),
ಶೆಟ್ಟಿ ಹಳ್ಳಿ ಗೇಟ್ ನ ಪುರುಷ(46), ದೇವನೂರು ಚರ್ಚ್ ನ‌ ಪುರುಷ (64), ಸಪ್ತಗಿರಿ ಬಡಾವಣೆಯ ಇಬ್ಬರು ಪುರುಷರು(47), (40), ಎಸ್ಐಟಿ 13ನೇ ಕ್ರಾಸ್ ನ ಪುರುಷ(64), ಸದಾಶಿವ ನಗರದ ಪುರುಷ(35),

ತಿಪಟೂರು ಕೆ.ಆರ್ ಬಡಾವಣೆಯ ಪುರುಷ(50), ರಾಮಚಂದ್ರಾಪುರದ ಪುರುಷ(52), ಅರಸು ನಗರದ ಪುರುಷ(48),

ಚಿಕ್ಕನಾಯಕನಹಳ್ಳಿ ಶೆಟ್ಟಿಕೆರೆಯ ಪುರುಷ(54),

ತುರುವೇಕೆರೆ ತಾಲ್ಲೂಕಿನ ದಬ್ಬೆಘಟ್ಟದ ಯುವತಿ (23)
ಹೊಸ ಸೋಂಕಿತರಾಗಿದ್ದಾರೆ.

You May Also Like

More From Author

+ There are no comments

Add yours