1 ವರ್ಷದ ಮಗು, 2 ತಿಂಗಳ ಗರ್ಭಿಣಿಗೆ ಕೊರೋನಾ; ಕಳವಳ ವ್ಯಕ್ತಪಡಿಸಿದ ಡಿಎಚ್ಒ

1 min read

 

ತುಮಕೂರು(ಜು. 7) tumkurnews.in

ಜಿಲ್ಲೆಯಲ್ಲಿ ಜುಲೈ 7 ರಂದು ಕಂಡು ಬಂದಿರುವ 24 ಹೊಸ ಕೊರೋನಾ ಪ್ರಕರಣಗಳಲ್ಲಿ ಒಂದು ವರ್ಷದ ಮಗು, ಎರಡು ತಿಂಗಳ ಗರ್ಭಿಣಿ ಇದ್ದಾರೆ ಎಂದು ಡಿ.ಎಚ್.ಒ ಡಾ.ನಾಗೇಂದ್ರಪ್ಪ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಲೇ ಇರುವ ಬಗ್ಗೆ ವಿವರಣೆ ನೀಡಿದ ಅವರು, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಂಟೋನ್ಮೆಂಟ್ ಜೋನ್ ನಲ್ಲಿದ್ದ ವ್ಯಕ್ತಿಯಲ್ಲಿ ಪಾಸಿಟಿವ್ ಬಂದಿದೆ. ಹೀಗಾಗಿ ಆ ಪ್ರದೇಶದಲ್ಲಿ ತೀವ್ರ ನಿಗಾ ವಹಿಸಲಾಗಿದೆ.
ತುಮಕೂರು ತಾಲೂಕಿನ ನಾಗವಲ್ಲಿಯಲ್ಲಿ 55 ವರ್ಷದ ಸೋಂಕಿತ ಮಹಿಳೆ ಮೃತಪಟ್ಟಿದ್ದಾರೆ. ಡಯಾಬಿಟಿಸ್ ನಿಂದ ಬಳಲುತ್ತಿದ್ದ ಅವರು, ಜುಲೈ 6 ರಂದು ಬಹಳ ತಡವಾಗಿ ಆಗಮಿಸಿದ್ದರಿಂದ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ
ತಿಳಿಸಿದ್ದಾರೆ.

(ವಿಡಿಯೋ ನೋಡಿ)

You May Also Like

More From Author

+ There are no comments

Add yours