ಹಾವು ಕಡಿತದಿಂದ ರಾಜ್ಯ ರೈತ ಸಂಘದ ಮುಖಂಡ ಮೃತ್ಯು

1 min read

 

ತುಮಕೂರು(ಜು.6) Tumkurnews.in

ಜಿಲ್ಲೆಯ ಹಿರಿಯ ರೈತ ಹೋರಾಟಗಾರ ತಿಪಟೂರು ತಾಲೂಕಿನ ಬೆನ್ನನಾಯಕನಹಳ್ಳಿಯ ದೇವರಾಜ್ ಭಾನುವಾರ ಹಾವು ಕಡಿತಕ್ಕೆ ಬಲಿಯಾಗಿದ್ದಾರೆ.

ಇವರು ರಾಜ್ಯ ರೈತ ಸಂಘದ ಉಪಾಧ್ಯಕ್ಷರಾಗಿ ಹಲವು ರೈತ ಪರ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಮೃತರ ಅಗಲಿಕೆ ನಾಡಿನ ರೈತ ಪರ ಹೋರಾಟದ ಧ್ವನಿಯೊಂದನ್ನು ಕಳೆದುಕೊಂಡಂತಾಗಿದೆ.

ರೈತ ನಾಯಕ ರಾಗಿದ್ದ ಪ್ರೊ. ನಂಜುಂಡಸ್ವಾಮಿಯವರ ರೈತ ಚಳವಳಿ ಪ್ರಭಾವಕ್ಕೆ ಒಳಗಾಗಿ ತಾವೂ ರೈತ ಪರ ಹೋರಾಟದಲ್ಲಿ ತೊಡಗಿಕೊಂಡಿದ್ದರು.
ನೀರಾ ಚಳವಳಿ, ಕೊಬ್ಬರಿ ಬೆಂಬಲ ಹೋರಾಟ, ವಿದ್ಯುತ್ ತೊಂದರೆ ಹೋರಾಟ ಮುಂತಾದ ಹೋರಾಟಗಳಲ್ಲಿ ಸುಮಾರು 30ವರುಷಗಳ ಕಾಲ ರಾಜ್ಯದ ಅನ್ನದಾತನ ಧ್ವನಿಯಾಗಿದ್ದರು. ಮೃತರ ಅಗಲಿಕೆಗೆ ನಾಡಿನ ರೈತ ಸಮುದಾಯ, ಗಣ್ಯರು ಕಂಬನಿ ಮಿಡಿದಿದ್ದಾರೆ.

You May Also Like

More From Author

+ There are no comments

Add yours