ದೇಶಸೇವೆಯೆಂದು ಪರಿಗಣಿಸಿ ಕೆಲಸ ಮಾಡಿ, ಆರೋಗ್ಯ ಸಿಬ್ಬಂದಿಗೆ ಸಚಿವ ಮಾಧುಸ್ವಾಮಿ ಮನವಿ

1 min read

 

ತುಮಕೂರು(ಜು.6) Tumkurnews.in

ಆರೋಗ್ಯ ಸಿಬ್ಬಂದಿಗಳು ಕೊರೋನಾ ವೈರಸ್ ಬಗ್ಗೆ ಭಯಪಡದೇ ದೇಶಸೇವೆ ಎಂದು ಭಾವಿಸಿ ಸೋಂಕಿನ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಮನವಿ ಮಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಸೋಂಕು ತಡೆಗಟ್ಟುವಲ್ಲಿ ಆರೋಗ್ಯ ಸಿಬ್ಬಂದಿಗಳು ಬಹಳಷ್ಟು ಶ್ರಮಿಸುತ್ತಿದ್ದಾರೆ. ಶುಶ್ರೂಕಿಯರು ಭಯಭೀತರಾಗಿ ಕೆಲಸವನ್ನು ಬಿಡುತ್ತಿದ್ದಾರೆ ಎಂಬ ಮಾಹಿತಿಯಿದೆ. ಆರೋಗ್ಯ ಸಿಬ್ಬಂದಿಗಳು ಯಾವುದೇ ಆತಂಕಕ್ಕೊಳಗಾಗದೆ ದೇಶಸೇವೆ ಎಂದು ಪರಿಗಣಿಸಿ ಸಂಕಷ್ಟ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಸೋಂಕಿನ ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

You May Also Like

More From Author

+ There are no comments

Add yours