ತುಮಕೂರು ನಗರ ಸೇರಿ ಜಿಲ್ಲೆಯಲ್ಲಿಂದು 16 ಪಾಸಿಟಿವ್, ಒಂದು ಸಾವು

1 min read

 

ತುಮಕೂರು(ಜು.6) tumkurnews.in

ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ 16 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದು, ಭಾನುವಾರ ಒಂದು ಸಾವು ಸಂಭವಿಸಿದೆ.
ಭಾನುವಾರ ಮೃತ ಪಟ್ಟ ತುಮಕೂರು ನಗರದ ವಿನಾಯಕ ನಗರದ ನಿವಾಸಿ 78 ವರ್ಷದ ವೃದ್ಧರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಎಂದು ಜಿಲ್ಲಾ ಸರ್ಜನ್ ಡಾ.ವೀರಭದ್ರಯ್ಯ ತಿಳಿಸಿದ್ದಾರೆ.

**
ತಾಲೂಕುವಾರು ವಿವರ:
ಚಿಕ್ಕನಾಯಕನಹಳ್ಳಿ 1
ಕೊರಟಗೆರೆ 4
ಕುಣಿಗಲ್ 1
ಮಧುಗಿರಿ 2
ಪಾವಗಡ 2
ತುಮಕೂರು 6
ಒಟ್ಟು: 16
**
ಜಿಲ್ಲೆಯಲ್ಲಿ ಈವರೆಗೆ 268 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 194 ಜನ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. 65 ಮಂದಿ ಗುಣವಾಗಿದ್ದು, ಒಟ್ಟು 9 ಸಾವು ಸಂಭವಿಸಿದೆ.

You May Also Like

More From Author

+ There are no comments

Add yours