ಕೋವಿಡ್ ಆಸ್ಪತ್ರೆಯ ನರ್ಸ್ ಗೆ ಕೊರೋನಾ, ಬೆಚ್ಚಿ ಬಿದ್ದ ಆರೋಗ್ಯ ಕ್ಷೇತ್ರ

1 min read

 

ತುಮಕೂರು(ಜು.3) tumkurnews.in

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಸಿಬ್ಬಂದಿಗೆ ಶುಕ್ರವಾರ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ವೈದ್ಯಕೀಯ ಸಿಬ್ಬಂದಿಗೆ ಸೋಂಕು ದೃಢಪಟ್ಟ ಪ್ರಥಮ ಪ್ರಕರಣ ಇದಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ನರ್ಸಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದ 37 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಜೂ.29ರಂದು ಈಕೆಯ ಗಂಟಲು ದ್ರವದ ಮಾದರಿಯನ್ನು ತೆಗೆದು ಜಿಲ್ಲಾಸ್ಪತ್ರೆಯ ಆರ್ ಟಿ- ಪಿಸಿಆರ್ ಲ್ಯಾಬ್ ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು, ಶುಕ್ರವಾರ ಸೋಂಕು ತಗಲಿರುವುದು ಕಂಡು ಬಂದಿದೆ. ಈಕೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 3 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.
ಮತ್ತೋರ್ವ ನರ್ಸಿಂಗ್ ಸ್ಟಾಫ್ ಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದ್ದು, ಆರೋಗ್ಯ ಇಲಾಖೆಯ ಬುಲೆಟಿನ್ ನಲ್ಲಿ ಮಾಹಿತಿ ಬಹಿರಂಗ ಪಡಿಸಿಲ್ಲ.

ನರ್ಸ್ ಗೆ ಕೊರೋನಾ ಬಂದ ತಕ್ಷಣವೇ ಎಚ್ಚೆತ್ತ ಆರೋಗ್ಯ ಇಲಾಖೆ ಕೂಡಲೇ ಆಕೆಯನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಿಕೊಂಡಿದೆ.

You May Also Like

More From Author

+ There are no comments

Add yours