ತುಮಕೂರು(ಜು.1) tumkurnews.in
ತುಮಕೂರು ತಾಲ್ಲೂಕಿನಲ್ಲಿ ಬುಧವಾರ ಪತ್ತೆಯಾಗಿರುವ 8 ಕೋವಿಡ್ 19 ಸೋಂಕು ಪ್ರಕರಣಗಳಲ್ಲಿ 6 ಮಂದಿ ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲದಿದ್ದರೂ ಸೋಂಕು ತಗಲಿದೆ. ಅಲ್ಲದೇ ಇಬ್ಬರನ್ನು ಬಿಟ್ಟು ಉಳಿದ ಯಾರಿಗೂ ಕೋವಿಡ್ 19 ಲಕ್ಷಣಗಳು ಇರಲಿಲ್ಲ ಎನ್ನುವುದು ಅಪಘಾತಕ್ಕೆ ಕಾರಣವಾಗಿದ್ದು, ಜನರು ಎಚ್ಚರಿಕೆ ವಹಿಸಬೇಕಿದೆ.
ಸೋಂಕಿತರಲ್ಲಿ ನಗರದ ಮರಳೂರು ದಿಣ್ಣೆಯ 11 ವರ್ಷದ ಬಾಲಕಿಯೂ(ಟಿಎಂಕೆ 117) ಸೇರಿದ್ದಾಳೆ.
ಜೂ.16 ರಂದು ರಾಯಚೂರಿನಿಂದ ಬಂದಿದ್ದ ಈಕೆಯ ಗಂಟಲು ದ್ರವ ಮಾದರಿಯನ್ನು ಜೂ.27ರಂದು ಪಡೆದು ತಪಾಸಣೆಗೆ ಒಳಪಡಿಸಲಾಗಿತ್ತು, ಜು.1 ರಂದು ಸೋಂಕು ದೃಢಪಟ್ಟಿದೆ. ಈಕೆಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 7 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ಅಶೋಕ ನಗರದ 27 ವರ್ಷದ ಯುವತಿ (ಟಿಎಂಕೆ 123)ಯಲ್ಲಿ ಪಾಸಿಟಿವ್ ಬಂದಿದ್ದು, ಈಕೆಯ ಟ್ರಾವೆಲ್ ಹಿಸ್ಟರಿ ಪತ್ತೆ ಮಾಡಲಾಗುತ್ತಿದೆ.
ಸಿದ್ದಗಂಗಾ ಬಡಾವಣೆಯ 2ನೇ ಕ್ರಾಸ್ ವಾಸಿ 34 ವರ್ಷದ ಪುರುಷ (ಟಿಎಂಕೆ 139)ನಲ್ಲಿ ಸೋಂಕು ದೃಢಪಟ್ಟಿದೆ, ಈತನೊಂದಿಗಿದ್ದ ಇಬ್ಬರನ್ನು ಕ್ವಾರಂಟೈನ್ ಮಾಡಲಾಗಿದೆ.
ಸಿದ್ಧಾರ್ಥ ನಗರದ 47 ವರ್ಷದ ಮಹಿಳೆ(ಟಿಎಂಕೆ 115)ಯಲ್ಲಿ ಪಾಸಿಟಿವ್ ಬಂದಿದ್ದು, ಇಬ್ಬರನ್ನು ಕ್ವಾರಂಟೈನ್ ಮಾಡಲಾಗಿದೆ. ಈಕೆಯ ಟ್ರಾವೆಲ್ ಹಿಸ್ಟರಿ ಕೂಡ ಪತ್ತೆಯಾಗಿಲ್ಲ.
ಡಿ.ಎಸ್ ಪಾಳ್ಯದ 60 ವರ್ಷದ ವೃದ್ಧೆ(ಟಿಎಂಕೆ 131)ಯಲ್ಲಿ ಸೋಂಕು ಪತ್ತೆಯಾಗಿದೆ, ಈಕೆಯ ಸಂಪರ್ಕದಲ್ಲಿದ್ದ 9 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಟ್ರಾವೆಲ್ ಹಿಸ್ಟರಿ ಪತ್ತೆ ಮಾಡಲಾಗುತ್ತಿದೆ.
ತಾಲ್ಲೂಕಿನ ಮಂಚಕಲ್ಲುಕುಪ್ಪೆಯ 39 ವರ್ಷದ ಪುರುಷ (ಟಿಎಂಕೆ 118)ನ ಗಂಟಲು ದ್ರವ ಮಾದರಿಯನ್ನು ಜೂ.27 ರಂದು ಪಡೆದು ತಪಾಸಣೆಗೆ ಒಳಪಡಿಸಲಾಗಿತ್ತು. ಈತ ಜೂ.26ರಂದು ಒರಿಸ್ಸಾ ರಾಜ್ಯದಿಂದ ಬಂದವನಾಗಿದ್ದು, ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಓರ್ವನನ್ನು ಕ್ವಾರಂಟೈನ್ ಮಾಡಿದೆ.
ಹೆಬ್ಬಾಕ ಗ್ರಾಮದಲ್ಲಿ 45 ವರ್ಷದ ಪುರುಷ (ಟಿಎಂಕೆ 121)ನಲ್ಲಿ ಸೋಂಕು ಪತ್ತೆಯಾಗಿದೆ. ಈತನ ಸಂಪರ್ಕದಲ್ಲಿದ್ದವರ ಪತ್ತೆ ನಡೆಸಲಾಗುತ್ತಿದೆ.
ಸಿ.ಎಂ ಬಡಾವಣೆಯ 54 ವರ್ಷದ ಪುರುಷ (ಟಿಎಂಕೆ 136) ಎಂಬಾತ ಕೆಮ್ಮು, ನೆಗಡಿ ಎಂದು ಆಸ್ಪತ್ರೆಗೆ ತೆರಳಿದಾಗ ಕೊರೋನಾ ಪತ್ತೆಯಾಗಿದೆ, ಸಂಪರ್ಕದಲ್ಲಿದ್ದ 5 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
+ There are no comments
Add yours