ತುಮಕೂರು,(ಜೂ.22) tumkurnews.in:
ವೈದ್ಯರು ಮತ್ತು ಸಿಬ್ಬಂದಿಯ ಶ್ರಮದಿಂದ
ಜಿಲ್ಲೆಯಲ್ಲಿ ಸೋಮವಾರ 8 ಮಂದಿ ಕೋವಿಡ್ 19 ಸೋಂಕಿತರು ಗುಣಮುಖರಾಗಿದ್ದಾರೆ.
ಮೇ 30 ರಂದು ಶಿರಾ ಟೌನ್ ನಾಯಕರಹಟ್ಟಿ ವೃತ್ತದಲ್ಲಿ ಪಾತ್ರೆ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿಯೋರ್ವ ಆಂಧ್ರಪ್ರದೇಶದ ಹಿಂದೂಪುರಕ್ಕೆ ತೆರಳಿ, ಹೆಂಡತಿ, ಮಕ್ಕಳೊಂದಿಗೆ ಜೂ.2 ರಂದು ಶಿರಾಗೆ ಮರಳಿ ಬಂದಿದ್ದನು.
ಜೂ.06 ರಂದು ಈತ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದು, ಜೂ.08 ರಂದು ಪಾಸಿಟಿವ್ ಬಂದಿತ್ತು. ನಂತರ ಈತನ ಪತ್ನಿ ಹಾಗೂ ಮಕ್ಕಳು, ನೆರೆಮನೆಯಾತ ಸೇರಿದಂತೆ ಒಟ್ಟು 07 ಜನರಿಗೆ ಈತನಿಂದ ಕೋವಿಡ್ 19 ಸೋಂಕು ತಗಲಿತ್ತು. ಜಿಲ್ಲೆಯ ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಈ ಎಲ್ಲಾ 7 ಜನರನ್ನು ಗುಣ ಪಡಿಸಲಾಗಿದೆ.
ಮಧುಗಿರಿ ತಾಲೂಕಿನ ನೇರಳೆಕಟ್ಟೆ ಗ್ರಾಮದ ಓರ್ವ ಸೋಂಕಿತ ಕೂಡ ಗುಣವಾಗಿ ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಎರಡು ಹೊಸ ಕೇಸ್:
ಈ ನಡುವೆ ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ 20 ವರ್ಷದ ಯುವಕ(tmk 52)ನಲ್ಲಿ ಜೂ.22ರಂದು ಪಾಸಿಟಿವ್ ಬಂದಿದೆ.
ಮತ್ತೊಂದು ಪ್ರಕರಣದಲ್ಲಿ ಶಿರಾ ತಾಲೂಕಿನ 44 ವರ್ಷದ ಮಹಿಳೆ(tmk 51)ಗೆ ಸೋಂಕು ತಗಲಿದೆ.
ಸದ್ಯ ಜಿಲ್ಲೆಯಲ್ಲಿ ಈವರೆಗೆ 52 ಜನರಿಗೆ ಪಾಸಿಟಿವ್ ಬಂದಿದ್ದು, 39 ಜನ ಗುಣವಾಗಿದ್ದಾರೆ, ಇಬ್ಬರು ಸಾವನ್ನಪ್ಪಿದ್ದು, 11 ಜನರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
—-
ಸೋಮವಾರ ಡಿಸ್ಚಾರ್ಜ್ ಆದವರು,
P 5813
P 6399
P 6400
P 6401
P 6402
P 6403
P 6404
P 6405
+ There are no comments
Add yours