ಬ್ಯಾಂಕ್ ಸಾಲ ಒದಗಿಸಲು ಅರ್ಜಿ ಆಹ್ವಾನ

1 min read

 

ತುಮಕೂರು ನ್ಯೂಸ್.ಇನ್,(ಜೂ.17):
ಜಿಲ್ಲಾ ಪಂಚಾಯತ್ ಕೈಗಾರಿಕಾ ವಿಭಾಗವು 2020-21ನೇ ಸಾಲಿಗೆ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿ ಜಿಲ್ಲೆಯ ಗ್ರಾಮಾಂತರ ಪ್ರದೇಶದ ವೃತ್ತಿನಿರತ ಬಡಗಿ, ಕ್ಷೌರಿಕ, ದೋಬಿ, ಕಲ್ಲುಕುಟಿಕ, ಗಾರೆ, ಕಮ್ಮಾರಿಕೆ, ಬೆತ್ತದಕೆಲಸ, ಬುಟ್ಟಿ ಹೆಣೆಯುವುದು, ಕಸೂತಿ(ಜರಿ ಕೆಲಸ), ಕರಕುಶಲ ವಸ್ತು ತಯಾರಿಸುವ ವೃತ್ತಿ ನಿರತ ಗ್ರಾಮೀಣ ಕುಶಲಕರ್ಮಿಗಳಿಗೆ ಬಂಡವಾಳ ಹೂಡಿಕೆ ಸಹಾಯಧನ ಹಾಗೂ ಬ್ಯಾಂಕ್ ಸಾಲ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ. ಯೋಜನಾ ವೆಚ್ಚದ ಗರಿಷ್ಠ ಮೊತ್ತ 30,000ರೂ ಗಳಾಗಿದ್ದು, ಯೋಜನಾ ವೆಚ್ಚದ ಶೇ.60ರಷ್ಟು ಗರಿಷ್ಠ 10,000ರೂ.ಗಳ ಸಹಾಯಧನ ನೀಡಲು ಅವಕಾಶವಿರುತ್ತದೆ. ಅರ್ಹ ಮತ್ತು ಆಸಕ್ತ ವೃತ್ತಿ ನಿರತ ಕುಶಲಕರ್ಮಿಗಳು ಅರ್ಜಿಗಳನ್ನು ಗ್ರಾಮೀಣ ಕೈಗಾರಿಕ ವಿಭಾಗ ಉಪನಿರ್ದೇಶಕರು, ಜಿಲ್ಲಾ ಪಂಚಾಯತ್, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಕೈಗಾರಿಕ ವಸಾಹತು, ಬಿ.ಹೆಚ್.ರಸ್ತೆ, ತುಮಕೂರು ಅಥವಾ ಆಯಾ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳ ಕಛೇರಿಯಿಂದ ಪಡೆದು ಜುಲೈ 20ರೊಳಗೆ ಸಲ್ಲಿಸಲು ಜಿಲ್ಲಾಪಂಚಾಯತ್ ಗ್ರಾಮೀಣ ಕೈಗಾರಿಕಾ ವಿಭಾಗ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You May Also Like

More From Author

+ There are no comments

Add yours