ಮಧುಗಿರಿಗೆ 4 ಸಾವಿರ ಮನೆ, ಎತ್ತಿನಹೊಳೆ ನೀರು; ಬಸವರಾಜ್

0 min read

 

ತುಮಕೂರು ನ್ಯೂಸ್.ಇನ್(ಜೂ.12):
ಮಧುಗಿರಿ: ಎತ್ತಿನಹೊಳೆ ಯೋಜನೆ ಜೊತೆಗೆ ಕುಮಾರ ಧಾರಾ ಯೋಜನೆ ಅನುಷ್ಠಾನಗೊಳಿಸಿ, 15ರಿಂದ 16 ಟಿಎಂಸಿ ನೀರನ್ನು ಮಧುಗಿರಿ ಭಾಗಕ್ಕೆ ದೊರೆಯುವಂತೆ ಮಾಡಬೇಕು. ಈ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸದ ಜಿ.ಎಸ್.ಬಸವರಾಜ್ ತಿಳಿಸಿದರು.
ಮಧುಗಿರಿ ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆಯ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಾಲೂಕಿನ ಅಲೆಮಾರಿ ಜನಾಂಗದವರಿಗೆ ವಸತಿ ಕಲ್ಪಿಸುವ ಹಿನ್ನೆಲೆಯಲ್ಲಿ 4000 ಮನೆಗಳನ್ನು ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ಯೋಜನೆಯಿಂದ ಕಾಡುಗೊಲ್ಲ, ಅಕ್ಕಿಪಿಕ್ಕಿ ಸೇರಿದಂತೆ ತಾಲೂಕು ಅಲೆಮಾರಿ ಜನಾಂಗದವರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
12ಮಧುಗಿರಿ ಫೋಟೋ 2

You May Also Like

More From Author

+ There are no comments

Add yours